fbpx

ಅಪರೂಪದ ಎರಡು ತಲೆಯ ಹಾವು ಪತ್ತೆ, ವೈರಲ್ ವಿಡಿಯೋ ನೋಡಿ

ಬಹಳ ವಿರಳವಾಗಿ ಕಾಣಸಿಗುವ ಎರಡು ತಲೆಯ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಮೇರಿಕಾದ ನಾರ್ಥ್ ಕರೋಲಿ‌‌ನಾದಲ್ಲಿ ಈ ಹಾವು ಪತ್ತೆಯಾಗಿದ್ದು, ಮಹಿಳೆಯೊಬ್ಬರು ಈ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾರ್ಥ್ ಕರೊಲಿನಾದ ಅಲೆಕ್ಸಾಂಡರ್ ಕೌಂಟಿಯಲ್ಲಿರುವ ಜೆನ್ನೀ ವಿಲ್ಸನ್ ಎಂಬ ಮಹಿಳೆಯ ಮನೆಯಲ್ಲಿ ಈ ಎರಡು ತಲೆಯ ಹಾವು ಪತ್ತೆಯಾಗಿದೆ. ಸುಮಾರು ಒಂದು ಅಡಿ ಉದ್ದದ ಕಪ್ಪು ಬಣ್ಣ, ಬಿಳಿ ಮಚ್ಚೆ ಹೊಂದಿರುವ ಎರಡು ತಲೆ ಹಾವನ್ನು ನೋಡಿದ ತಕ್ಷಣ ಅವರು ತಮ್ಮ ಅಳಿಯನನ್ನು ಕರೆದಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಹಾವನ್ನು ಕೊಲ್ಲಲು ಇಷ್ಟವಿಲ್ಲದ ಕಾರಣ ಸುರಕ್ಷಿತವಾಗಿ ಹಿಡಿದು ಪ್ಲಾಸ್ಟಿಕ್ ಡಬ್ಬವೊಂದಕ್ಕೆ ಹಾಕಿದ್ದಾರೆ. ನಂತರ ಅದನ್ನು ಕ್ಯಾಟವ್ಬಾ ವಿಜ್ಞಾನ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಈ ಹಾವಿಗೆ ಅವರು ‘ಡಬಲ್ ಟ್ರಬಲ್’ ಎಂದು ಹೆಸರಿಟ್ಟಿದ್ದು, ಸದ್ಯ ಹಾವಿನ ವಿಡಿಯೋ ವೈರಲ್ ಆಗಿದೆ.

ಹಾವಿನ ಬಗ್ಗೆ‌ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮಾತನಾಡಿದ್ದು, ‘ಇದೊಂದು ಬ್ಲ್ಯಾಕ್ ರ‍್ಯಾಟ್ ಜಾತಿಗೆ ಸೇರಿದ ಹಾವಾಗಿದ್ದು, ನಾಲ್ಕು ತಿಂಗಳ ಮರಿಯಾಗಿದೆ. ಈ ಹಾವು ವಿಷಕಾರಿಯೇನಲ್ಲ, ಸುಮಾರು ಒಂದು ಲಕ್ಷ ಹಾವುಗಳಲ್ಲಿ ಒಂದರಲ್ಲಿ ಮಾತ್ರ ಎರಡು ತಲೆ ಕಂಡು ಬರುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

Watch Video

video

error: Content is protected !!