fbpx

ಆಹಾರ ಹುಡುಕಿ ನಾಡಿಗೆ ಬಂದ ಕೋತಿಯನ್ನು ಗಲ್ಲಿಗೆ ಹಾಕಿ ಅಮಾನವೀಯವಾಗಿ ಹತ್ಯೆಗೈದ ಗುಂಪು, ವೀಡಿಯೋ ವೈರಲ್

ಕೇರಳದಲ್ಲಿ ಆಹಾರದ ಜೊತೆ ಸ್ಪೋಟಕ ನೀಡಿ ಆನೆಯನ್ನು ಕೊಂದು ಹಾಕಿರುವ ಘಟನೆ ಮಾಸುವ ಮುನ್ನವೇ ಇದೀಗ ತೆಲಂಗಾಣದಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಹಸಿವಿನಿಂದ ಆಹಾರ ಹುಡುಕಿಕೊಂಡು ನಾಡಿಗೆ ಬಂದ ಕೋತಿಯೊಂದನ್ನು ಹಿಡಿದ ಗುಂಪು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.

ಕೋತಿಯನ್ನು ಹೊಂಚು ಹಾಕಿ ಹಿಡಿದ ಹಳ್ಳಿಗರ ಗುಂಪು ಅದನ್ನು ಹಿಂಸಾತ್ಮಕವಾಗಿ ಥಳಿಸಿ, ನಂತರ ಹಗ್ಗದಿಂದ ಕೋತಿಯನ್ನು ಕಟ್ಟಿ ಮನಬಂದಂತೆ ಹೊಡೆದಿದ್ದಾರೆ. ನಂತರ ಕೋತಿಯ ಕುತ್ತಿಗೆಗೆ ಹಗ್ಗಕಟ್ಟಿ ಗಲ್ಲಿಗೇರಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ನರರಾಕ್ಷಸರು ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿದ್ದ ಕೋತಿಯ ಮೇಲೆ ದಾಳಿ ಮಾಡಲು ನಾಯಿಗಳನ್ನು ಬಿಟ್ಟು ತಮಾಷೆ ನೋಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರ ಆಕ್ರೋಶ ನೆತ್ತಿಗೇರುವಂತೆ ಮಾಡಿದೆ.

ಪ್ರಕರಣದ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೆಲ ಆರೋಪಿಗಳನ್ನು ಬಂದಿಸಲಾಗಿದ್ದು, ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ‌ ಎಂದು ತಿಳಿದುಬಂದಿದೆ. ಇಂತಹ ನರರಾಕ್ಷಸರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಜನರು ಬೇಡಿಕೆ ಇಟ್ಟಿದ್ದಾರೆ. ವೀಡಿಯೋ ನೋಡಿ,

Watch Video

error: Content is protected !!