ಕಾಡು ಪ್ರಾಣಿಗಳ ಜೊತೆ ಮೋಜುಮಸ್ತಿ ಮಾಡುವುದು ಕೆಲವೊಮ್ಮೆ ಜೀವಕ್ಕೆ ಅಪಾಯಕಾರಿಯಾಗಿರೋ ಸುದ್ದಿ ನಾವು ಹಲವು ಬಾರಿ ಕೇಳಿರುತ್ತೇವೆ. ಅದರಲ್ಲೂ ಗಜರಾಜನ ಜೊತೆ ಮಸ್ತಿ ಮಾಡೋದು ನಿಜಕ್ಕೂ ಅಪಾಯ.
ಆದರೆ ಯುವತಿಯೊಬ್ಬಳು ನದಿಯೊಂದರ ಬಳಿ ಆನೆಯ ಸೊಂಡಿಲೇರಿ ಬಿಂದಾಸ್ ಆಗಿ ಕುಳಿತುಕೊಳ್ಳುವ ವೀಡಿಯೋವೊಂದು ವೈರಲ್ ಆಗಿದೆ. ಸೊಂಡಿಲನ್ನೇರಿ ಬಿಗಿದಪ್ಪಿ ಮಲಗುವ ಭಂಗಿಯಲ್ಲಿ ಕೂರುವ ಯುವತಿಯನ್ನು ಗಜರಾಜ ಹಿಮ್ಮುಖವಾಗಿ ನೀರಿಗೆ ಎಸೆಯುವ ದೃಶ್ಯ ಅದ್ಭುತವಾಗಿದೆ.
ಇದನ್ನು ಅಲ್ಲೇ ಇದ್ದ ವ್ಯಕ್ತಿ ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,