ಗ್ರಹಚಾರ ಕೆಟ್ರೆ ಬಲಿಷ್ಟರು ಎನಿಸಿಕೊಂಡೋರು ಕೂಡ ದುರ್ಬಲರಿಗೆ ತಲೆಭಾಗಬೇಕಾಗಿ ಬರುತ್ತೆ ಅನ್ನೋದಕ್ಕೆ ಈ ವೀಡಿಯೋನೆ ಸಾಕ್ಷಿ. ಕಾಡೆಮ್ಮೆಯನ್ನು ಬೇಟೆಯಾಡ ಹೋದ ಸಿಂಹವೇ ಕಾಡೆಮ್ಮೆ ದಾಳಿಗೆ ಬಲಿಯಾಗಬೇಕಾಗಿದೆ.
ಆಹಾರ ಅರಸಿಕೊಂಡು ಸಿಂಹವೊಂದು ಕಾಡೆಮ್ಮೆಗಳ ಗುಂಪಿನ ಮೇಲೆ ದಾಳಿ ಮಾಡಿದೆ. ಆದರೆ ಛಲಬಿಡದ ಕಾಡೆಮ್ಮೆ ಸಿಂಹವನ್ನೆ ನೆಲಕ್ಕೆ ಕೆಡವಿ ಕೊಂಬಿನಿಂದ ತಿವಿದು ಗಾಯಗೊಳಿಸಿದೆ.
ಅಲ್ಲೇ ಇದ್ದ ಇತರ ಕಾಡೆಮ್ಮೆಗಳು ಕೂಡ ಸಿಂಹದ ಮೇಲೆರಗಿ ಗಾಯಗೊಂಡಿರುವ ಗೆಳೆಯನನ್ನು ರಕ್ಷಿಸಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ,