ಗುಜರಿಗೆ ಹಾಕಲಾಗಿದ್ದ ವಿಮಾನವೊಂದು ತನ್ನ ಕೊನೆಯ ಹಾರಾಟ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಫ್ಲೋರಿಡಾದ ಮಿಯಾಮಿಯ ಓಪಲೋಕ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆಯ ವಿಡಿಯೋ ಇದಾಗಿದ್ದು, ಗುಜರಿಗೆ ಸೇರಿದ್ದ ಬೋಯಿಂಗ್ 707 ವಿಮಾನವನ್ನು ಎಸ್ಕವೇಟರ್ ಚಾಲಕ ಕೊಕ್ಕೆಯಿಂದ ಹಿಡಿದು ರೌಂಡ್ಸ್ ಹೊಡೆಸಿದ್ದಾನೆ.
ಈ ವಿಡಿಯೋವನ್ನು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಸ್ಕವೇಟರ್ ಚಾಲಕನ ಚಾಕಚಕ್ಯತೆಯನ್ನು ಜನರು ಮೆಚ್ಚಿಕೊಂಡಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,
Watch Video
