ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡೋದು ದೇವರ ಕೆಲಸ ಮಾಡಿದಕ್ಕೆ ಸಮ, ಆದರೆ ಈಗೀಗ ಮನುಷ್ಯ ಈ ಗುಣವನ್ನು ಮರೆತುಬಿಟ್ಟಿದ್ದಾನೆ. ಈ ಕ್ಯಾಮರಾ ಮೊಬೈಲ್ ಯುಗ ಬಂದ ಮೇಲಂತು ಯಾರದ್ರೂ ಸಂಕಷ್ಟದಲ್ಲಿದ್ದರೆ ಸಾಕು ಪೋಟೋ, ವಿಡಿಯೋ ತೆಗೆಯೋದೇ ಕಾಯಕವಾಗಿ ಬಿಟ್ಟಿದೆ.
ಈ ವಿಡಿಯೋನೆ ನೋಡಿ, ನಿರಂತರವಾಗಿ ಬೈಕ್ ಸವಾರರು ಪಲ್ಟಿಯಾಗುತ್ತಿದ್ದರೆ ಅಲ್ಲೇ ಇದ್ದ ಜನ ಸಹಾಯ ಮಾಡೋದು ಬಿಟ್ಟು ನೋಡುತ್ತಾ ನಿಂತಿದ್ದಾರೆ. ವೃತ್ತವೊಂದರ ಬಳಿ ನಾಲ್ಕು ನಿಮಿಷಗಳ ಅಂತರದಲ್ಲಿ ನಾಲ್ಕು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿದೆ. ರಸ್ತೆಯಲ್ಲಿ ಯಾವುದೋ ಜಾರು ಪದಾರ್ಥ ಇತ್ತೋ ಏನೋ, ವೃತ್ತದ ಬಳಿ ಯಾರೆಲ್ಲ ವೇಗವಾಗಿ ಬಂದು ಬಲಗಡೆಗೆ ವಾಹನ ತಿರುಗಿಸಿದ್ರೋ ಎಲ್ಲಾ ಸ್ಕಿಡ್ ಆಗಿ ಬಿದ್ದಿದ್ದಾರೆ.
ಅಲ್ಲೇ ನಿಂತುಕೊಂಡಿದ್ದ ಜನರು ಸಹಾಯಕ್ಕೆ ದಾವಿಸೋದು ಬಿಟ್ಟು, ದ್ವಿಚಕ್ರ ವಾಹನಗಳು ಉರೋಳೋದನ್ನ ನೋಡುತ್ತಾ ನಿಂತಿದ್ದಾರೆ. ಬಿದ್ದವರು ಅಷ್ಟೇ, ಎದ್ದು ತಮ್ಮ ಪಾಡಿಗೆ ತಾವು ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಒಂದು ವೇಳೆ ಮೊದಲೇ ಬಿದ್ದವರು ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಿದ್ದರೆ ಹಿಂದಿನಿಂದ ಬಂದ ಮೂವರು ಸವಾರರು ಬೀಳುತ್ತಿರಲಿಲ್ಲ.
ಸವಾರರ ಪುಣ್ಯಕ್ಕೆ, ಆ ಸಮಯದಲ್ಲಿ ರಸ್ತೆಯಲ್ಲಿ ಘನಗಾತ್ರದ ವಾಹನಗಳ ಸಂಚಾರ ಕಮ್ಮಿ ಇತ್ತು. ಇಲ್ಲವಾದಲ್ಲಿ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,