fbpx

ಮೊಸಳೆ ಬಾಯೊಳಗೆ ತಲೆ ಹಾಕಿದವನಿಗೆ, ಮೊಸಳೆ ಮಾಡಿದ್ದೇನು ನೋಡಿ (ವೈರಲ್ ವಿಡಿಯೋ)

ಮೊಸಳೆಯ ಜೊತೆ ಸರ್ಕಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಸಂಚಕಾರ ತಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಣಿ ಸಂಗ್ರಹಾಲಯಕ್ಕೆ ಬಂದಿದ್ದ ಪ್ರೇಕ್ಷಕರಿಗಾಗಿ ಏರ್ಪಡಿಸಲಾಗಿದ್ದ ಮೊಸಳೆಯ ಶೋನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪ್ರಾಣಿ ಸಂಗ್ರಹಾಲಕ್ಕೆ ಆಗಮಿಸುವ ಪ್ರೇಕ್ಷಕರೆದುರು ಸಾಹಸ ಪ್ರದರ್ಶನಕ್ಕಾಗಿ ಮೊಸಳೆಯನ್ನು ತರಬೇತುಗೊಳಿಸಲಾಗಿದ್ದು, ತರಬೇತಿ ಪಡೆದಿರುವ ಮೊಸಳೆಯ ಬಳಿಗೆ ಇಬ್ಬರು ಪ್ರದರ್ಶಕರು ಆಗಮಿಸಿದ್ದಾರೆ. ಒಬ್ಬಾತ ಮೊಸಳೆಯ ಬೀಲವನ್ನು ಹಿಡಿದುಕೊಂಡರೆ, ಇನ್ನೊಬ್ಬಾತ ಮೊಸಳೆಯ ಬಾಯೊಳಗೆ ತಲೆ ಹಾಕುವ ಸಾಹಸ ಪ್ರದರ್ಶಿಸಲು ಮುಂದಾಗಿದ್ದಾನೆ.

ಮೊಸಳೆಯ ಬಾಯೊಳಗೆ ತಲೆ ಹಾಕಲು ಹೋದ ಯುವಕನ ತಲೆಯನ್ನು ಮೊಸಳೆ ಬಿಗಿಯಾಗಿ ಹಿಡಿದು ಯುವಕನನ್ನು ಆಚೀಚೆ ಅಲುಗಾಡಿಸಿದೆ. ಯುವಕ‌ನ ಆಯಸ್ಸು ಗಟ್ಟಿಯಿತ್ತೇನೋ ಮೊಸಳೆ ಯುವಕನನ್ನು ಬಿಟ್ಟುಬಿಟ್ಟಿದೆ. ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಬ್ಯಾಂಕಾಕ್‌ನ ಹೊರವಲಯದಲ್ಲಿ ಸಮುತ್‌ಪ್ರಕರ್ನ್‌ ಮೊಸಳೆ ಪಾರ್ಕ್ ಮತ್ತು ಮೃಗಾಲಯದಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು ಆರು ವರ್ಷಗಳ ಹಿಂದೆ ಈ ಘಟನೆ ಸಂಭವಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತೆ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!