ಪತ್ರಕರ್ತೆಯ ಮೇಲೆ ಬೀಡಾಡಿ ದನ ದಾಳಿ ಮಾಡಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಬೀಡಾಡಿ ದನಗಳಿಂದಾಗುವ ತೊಂದರೆಗಳ ಬಗ್ಗೆ ವರದಿ ಮಾಡಲು ತೆರಳಿದ್ದ ಖಾಸಗಿ ಚಾನೆಲ್ನ ಪತ್ರಕರ್ತೆಯ ಮೇಲೆ ದನ ದಾಳಿ ಮಾಡಿದೆ.
ಬೀಡಾಡಿ ದನಗಳಿಂದಾಗುವ ತೊಂದರೆಗಳ ಬಗ್ಗೆ ಪತ್ರಕರ್ತೆ ವರದಿ ಮಾಡುತ್ತಿದ್ದಂತೆ ದನವೊಂದು ಹಿಂದಿನಿಂದ ಬಂದು ಗುಮ್ಮಿದೆ. ಸಣ್ಣ ದನ ದಾಳಿ ಮಾಡಿದ್ದರೆಂದ ಆಕೆಗೆ ಅಷ್ಟೇನೂ ತೊಂದರೆಯಾಗಿಲ್ಲ.
‘ಅಡ್ಡಾದಿಡ್ಡಿ ಚಲಿಸುವ ಬೀಡಾಡಿ ದನಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದು, ತುಂಬಾ ಜನ ಗಾಯಕ್ಕೊಳಗಾಗಿದ್ದರೆ.
ಇದಕ್ಕೆಲ್ಲ ಹೊಣೆ ಯಾರು? ಸ್ಥಳೀಯ ಮುನಿಸಿಪಾಲಿಟಿ, ಪೋಲೀಸರು, ಗೋರಕ್ಷಕರು ಮೌನವಾಗಿದ್ದಾರೆ’ ಎಂದು ಹೇಳುತ್ತಿದ್ದಂತೆ ದನ ಆಕೆ ಮೇಲೆ ದಾಳಿ ಮಾಡಿದೆ. ಈ ಘಟನೆ ಕಳೆದ ವರ್ಷ ನಡೆದಿದ್ದು, ಇದೀಗ ಮತ್ತೆ ವೈರಲ್ ಆಗ್ತಾ ಇದೆ. ವಿಡಿಯೋ ಇಲ್ಲಿದೆ ನೋಡಿ,
Watch Video
