fbpx

Please assign a menu to the primary menu location under menu

ಎಳೆಗೂಸಿನ ಮೇಲೆ ಕೊಂಬಿನಿಂದ ತಿವಿಯಲು ಬಂದ ಗೂಳಿ, ಸಿಸಿಟಿವಿಯಲ್ಲಿ ಸೆರೆಯಾಯಿತು ಬೆಚ್ಚಿಬೀಳಿಸುವ ದೃ಼ಶ್ಯ! ವೈರಲ್ ವಿಡಿಯೋ ನೋಡಿ

ಗೂಳಿಗಳು ಯಾವಾಗ ಯಾರ ಮೇಲರಗಿ ದಾಳಿ ಮಾಡುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲೊಂದು ಗೂಳಿ ಅಜ್ಜನ ಜೊತೆ ವಾಕಿಂಗ್‌ಗೆ ತೆರಳುತ್ತಿದ್ದ ಎಳೆಗೂಸಿನ ಮೇಲೆ ದಾಳಿ ಮಾಡಿ ಕೊಂಬಿನಿಂದ ತಿವಿಯಲು ಯತ್ನಿಸಿದೆ.

ಇಬ್ಬರು ಮೊಮ್ಮಕ್ಕಳು ಅಜ್ಜ, ಅಜ್ಜಿ ಜೊತೆ ವಾಕಿಂಗ್‌ಗೆ ತೆರಳಿದ್ದು, ಒಂದು ಮಗು ತ್ರಿಚಕ್ರ ಸೈಕಲ್ ತುಳಿಯುತ್ತಾ ಮುಂದೆ ಸಾಗಿದ್ದರೆ, ಅಜ್ಜ ಇನ್ನೊಂದು ಪುಟ್ಟ ಮಗುವನ್ನು ಸ್ಟ್ರೋಲರ್‌ನಲ್ಲಿ ಕೂರಿಸಿ ತಳ್ಳುತ್ತಾ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ತ್ರಿಚಕ್ರ ಸೈಕಲ್ ನಲ್ಲಿದ್ದ ಮಗುವಿನ ಮೇಲೆ ದಾಳಿಗೆ ಯತ್ನಿಸಿದೆ.

ಈ ಸಂದರ್ಭದಲ್ಲಿ ಅಜ್ಜ ಗೂಳಿಯನ್ನು ಓಡಿಸಲು ಯತ್ನಿಸಿದ್ದು, ಕೋಪಗೊಂಡ ಗೂಳಿ ಸ್ಟ್ರೋಲರ್‌ನಲ್ಲಿ ಮಲಗಿದ್ದ ಮಗುವಿಗೆ ತಿವಿಯಲು ಯತ್ನಿಸಿದೆ. ಆದರೆ ಅಜ್ಜ ಎಳೆಗೂಸು ಗೂಳಿಯ ದಾಳಿಗೆ ಸಿಲುಕದಂತೆ ಗಾಡಿಯನ್ನು ಸುತ್ತು ತಿರುಗಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ಅಜ್ಜಿ ಹಾಗೂ ಒಂದಿಬ್ಬರು ವ್ಯಕ್ತಿಗಳು ಓಡಿ ಬಂದು ಗೂಳಿಯನ್ನು ಓಡಿಸಿದ್ದಾರೆ. ಈ ಎಲ್ಲಾ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ. ವೈರಲ್ ವಿಡಿಯೋ ನೋಡಿ,

Watch Video

video
error: Content is protected !!