ಓವರ್ಲೋಡೆಡ್ ಲಾರಿ ಚಾಲಕನ ಆವಾಂತರಕ್ಕೆ ಭೀಕರ ಅಪಘಾತ ಸಂಭವಿಸಿ ಬೈಕ್ ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಧ್ಯಪ್ರದೇಶದ ಇಚಾಪುರ್ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯ ಸಂಪೂರ್ಣ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.
ಲಾರಿ ಚಾಲಕ ಓವರ್ಲೋಡ್ ಮಾಡಿಕೊಂಡು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ಲಾರಿ ಚಾಲಕನ ಹಿಂದಿನಿಂ ಬರುತ್ತಿದ್ದ ಬೈಕ್ ಸವಾರರು ಇದನ್ನು ನೋಡಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಇನ್ನೇನು ಲಾರಿಯನ್ನು ಅಡ್ಡಹಾಕಿ ಚಾಲಕನಿಗೆ ಬೈಬೇಕು ಎನ್ನುವಷ್ಟರಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಅಡ್ಡಾದಿಡ್ಡಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂದುಗಡೆಯಿಂದ ಬರುತ್ತಿದ್ದ ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ಪಕ್ಕ ಮಗುಚಿಬಿದ್ದಿದೆ. ಲಾರಿ ಡಿಕ್ಕಿಹೊಡೆದ ರಭಸಕ್ಕೆ ಟ್ರಾಕ್ಟರ್ ಎರಡು ಹೋಳಾಗಿದ್ದು, ಹಿಂದೆ ಬರುತ್ತಿದ್ದ ಬೈಕ್ಗೆ ಬಡಿದಿದೆ.
ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನೂ ಕೆಲವರಿಗೆ ಗಾಯಗಳಾಗಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿದೆ ನೋಡಿ ವಿಡಿಯೋ,