ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಸ್ತೆ ದಾಟುತ್ತಿದ್ದ ವೃದ್ದ ದಂಪತಿಗೆ ವೇಗವಾಗಿ ಬಂದ ಕಾರೊಂದು ಅಪ್ಪಳಿಸಿದ ಕಾರಣ ದಂಪತಿ ಸ್ಥಳದಲ್ಲೇ ಸಾವಿಗೀಡಾದ ಘಟನೆಯ ವಿಡಿಯೋ ಇದಾಗಿದೆ.
ತೆಲಂಗಾಣದ ವಾರಂಗಲ್ನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ವಾರಂಗಲ್ ಜಿಲ್ಲೆಯ ರಾಂಪುರದ ನಿವಾಸಿಗಳಾದ ನೈನಿ ಇಲಯ್ಯ (58) ಮತ್ತು ನೈನಿ ವೆಂಕಟಲಕ್ಷ್ಮಿ (52) ಎಂದು ತಿಳಿದುಬಂದಿದೆ.
ವೃದ್ದ ದಂಪತಿ ಬ್ಯಾಂಕಿನಿಂದ ಪಿಂಚಣಿ ಸಂಗ್ರಹಿಸಿ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಇಲಯ್ಯ ಅವರಿಗೆ ಕಾಲು ನೋವು ಇದ್ದ ಕಾರಣ ವಾಕಿಂಗ್ ಸ್ಟಿಕ್ ಬಳಸಿ ಪತ್ನಿಯ ಸಹಾಯದಿಂದ ಮೆಲ್ಲಗೆ ರಸ್ತೆ ದಾಟುತ್ತಿದ್ದರು.
ಈ ಸಂದರ್ಭದಲ್ಲಿ ಅತಿವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವೃದ್ದ ದಂಪತಿ ಹಾರಿ ಹೊಗಿ ಕೆಲ ಅಡಿಗಳಷ್ಟು ದೂರದಲ್ಲಿ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ
ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದಿದ್ದ ಈ ಭೀಕರ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭೀಕರ ಅಪಘಾತದ ವಿಡಿಯೋ ಇಲ್ಲಿದೆ ನೋಡಿ,
Watch Video
