ಚೀನೀ ವೈರಸ್ ಅಥವಾ ಕರೋನಾ ಸಾಂಕ್ರಾಮಿಕ ರೋಗದ ಕಾರಣ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಮಾಡಿದೆ. ಇದೀಗ ಕೆಲವು ಕಂಪನಿಗಳಿಗೆ ಇದೇ ಉದ್ದಿಮೆಯಾಗಿದ್ದು, ಬಗೆಬಗೆಯ ಮಾಸ್ಕ್ಗಳು ಮಾರುಕಟ್ಟೆಗೆ ಬರಲಾರಂಭಿಸಿದೆ.
ಕೆಲ ಶ್ರೀಮಂತ ವ್ಯಕ್ತಿಗಳಂತೂ ಲಕ್ಷಾಂತರ ಬೆಲೆಯ ಚಿನ್ನ, ಬೆಳ್ಳಿಯ ಮಾಸ್ಕ್ ಮಾಡಿಸಿ ಹಾಕಿಕೊಂಡಿದ್ದು ಇದೆ. ಇದೀಗ ವ್ಯಕ್ತಿಯೊಬ್ಬ ಹೊಸ ರೀತಿಯ ಮಾಸ್ಕ್ ಧರಿಸುವ ಮೂಲಕ ಸುದ್ದಿಯಾಗಿದ್ದಾನೆ. ಈತನ ಮಾಸ್ಕ್ ನೋಡಿ ಜನ ಆಶ್ಚರ್ಯದ ಜೊತೆ ಬೆಚ್ಚಿಬಿದ್ದಿದ್ದಾರೆ.
ಜೀವಂತ ಹೆಬ್ಬಾವನ್ನು ಮಾಸ್ಕ್ನಂತೆ ಧರಿಸುವ ಮೂಲಕ ವ್ಯಕ್ತಿಯೊಬ್ಬ ಸುದ್ದಿಯಾಗಿದ್ದಾನೆ. ಇಂಗ್ಲೆಂಡ್ನಲ್ಲಿ ನಡೆದಿರುವ ಈ ಘಟನೆಯಲ್ಲಿ, ಬಸ್ಸಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬ ಮಾಸ್ಕ್ನಂತೆ ಜೀವಂತ ಹೆಬ್ಬಾವನ್ನು ಮುಖಕ್ಕೆ ಧರಿಸಿಕೊಂಡಿದ್ದಾನೆ. ಇದನ್ನು ನೋಡಿದ ಸಹ ಪ್ರಯಾಣಿಕರು ಹೌಹಾರಿ ಹೋಗಿದ್ದಾರೆ.
ವ್ಯಕ್ತಿ ಇಂಗ್ಲೆಂಡ್ನ ಸ್ವಿಂಟನ್ನಿಂದ ಮ್ಯಾಂಚೆಸ್ಟರ್ಗೆ ಹೊರಟಿದ್ದ ಬಸ್ಸಿಗೆ ಹತ್ತಿದ್ದು, ಮಾಸ್ಕ್ ಜಾಗದಲ್ಲಿ ಹೆಬ್ಬಾವನ್ನು ಸುತ್ತಿಕೊಂಡಿದ್ದ ಇದನ್ನು ಕಂಡು ಸಹಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Watch Video
