fbpx

ವಿಶ್ವದ ಟಾಪ್ ಟೆನ್ ದೇಶಗಳ ಬ್ರ್ಯಾಂಡ್ ವರದಿ ಬಿಡುಗಡೆ! ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?

ಕೊರೋನಾ ಸಂಕಷ್ಟ ವಿಶ್ವದ ಎಲ್ಲ ದೇಶಗಳ ಆರ್ಥಿಕತೆ ಮೇಲೂ ಮಹತ್ತರ ಪರಿಣಾಮ ಬೀರಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬ್ರ್ಯಾಂಡ್ ಫೈನಾನ್ಸ್ ತನ್ನ ವಾರ್ಷಿಕ ವರದಿ “ನೇಷನ್ ಬ್ರ್ಯಾಂಡ್ಸ್ 2020” ಬಿಡುಗಡೆ ಮಾಡಿದೆ. ಅತ್ಯಂತ ಮೌಲ್ಯಯುತ ಮತ್ತು ಪ್ರಬಲ ದೇಶದ ಬ್ರ್ಯಾಂಡ್ ಗಳ ವರದಿ ನಿಮ್ಮೆದುರು ಇಲ್ಲಿದೆ.

ಬ್ರಾಂಡ್ ಫೈನಾನ್ಸ್ ವರದಿ ಪ್ರಕಾರ, ನೂರು ಅತ್ಯಂತ ಮೌಲ್ಯಯುತ ದೇಶದ ಬ್ರ್ಯಾಂಡ್ ಗಳು ಒಟ್ಟಾರೆಯಾಗಿ 13.1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಬ್ರ್ಯಾಂಡ್ ಮೌಲ್ಯದ ನಷ್ಟವನ್ನು ಅನುಭವಿಸಿವೆ. ಟಾಪ್ ಟೆನ್ ಬ್ರ್ಯಾಂಡ್ ಗಳಿಂದ ಸರಾಸರಿ 14% ನಷ್ಟವಾಗಿದೆ. ಅವುಗಳ ನಷ್ಟದ ವಿವರ ಹೀಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

1) ಯುನೈಟೆಡ್ ಸ್ಟೇಟ್ಸ್: ಬ್ರ್ಯಾಂಡ್ ವ್ಯಾಲ್ಯೂ $ 23,738 ಬಿಲಿಯನ್, 14.5% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

2) ಚೀನಾ: ಬ್ರ್ಯಾಂಡ್ ವ್ಯಾಲ್ಯೂ $ 18,764 ಬಿಲಿಯನ್, 3.7% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

3) ಜಪಾನ್: ಬ್ರ್ಯಾಂಡ್ ವ್ಯಾಲ್ಯೂ $ 4,261 ಬಿಲಿಯನ್, 6% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

4) ಜರ್ಮನಿ: ಬ್ರ್ಯಾಂಡ್ ವ್ಯಾಲ್ಯೂ $ 3,813 ಬಿಲಿಯನ್, 21.5% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

5) ಯುನೈಟೆಡ್ ಕಿಂಗ್ ಡಮ್: ಬ್ರ್ಯಾಂಡ್ ವ್ಯಾಲ್ಯೂ $ 3,315 ಬಿಲಿಯನ್, 13.9% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

6) ಫ್ರಾನ್ಸ್: ಬ್ರ್ಯಾಂಡ್ ವ್ಯಾಲ್ಯೂ $ 2,699 ಬಿಲಿಯನ್, 12.8% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

7) ಭಾರತ: ಬ್ರ್ಯಾಂಡ್ ವ್ಯಾಲ್ಯೂ $ 2,028 ಬಿಲಿಯನ್, 20.8% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

8) ಕೆನಡಾ: ಬ್ರ್ಯಾಂಡ್ ವ್ಯಾಲ್ಯೂ $ 1,900 ಬಿಲಿಯನ್, 13% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

9) ಇಟಲಿ: ಬ್ರ್ಯಾಂಡ್ ವ್ಯಾಲ್ಯೂ $ 1,776 ಬಿಲಿಯನ್, 15.8% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

10) ದಕ್ಷಿಣ ಕೊರಿಯಾ: ಬ್ರ್ಯಾಂಡ್ ವ್ಯಾಲ್ಯೂ $ 1,695 ಬಿಲಿಯನ್, 20.6% ಬ್ರ್ಯಾಂಡ್ ವ್ಯಾಲ್ಯೂ ಇಳಿಕೆ

error: Content is protected !!