fbpx

‘ಆಪತ್ಬಾಂಧವ’ ಸೋನು ಸೂದ್‌ಗೆ ನಿರ್ಮಾಣವಾಯಿತು ದೇವಾಲಯ! ಎಲ್ಲಿ ಗೊತ್ತೇ?

ನಟ ಸೋನು ಸೂದ್ ಅವರು ಕರೋನಾ ಸಂದರ್ಭದಲ್ಲಿ ಕೈಗೊಂಡ ಮಾನವೀಯ ಕಾರ್ಯವನ್ನು ಗುರುತಿಸಿ ತೆಲಂಗಾಣದ ಗ್ರಾಮಸ್ಥರು ಸೋನು ಸೂದ್‌ಗೆ ದೇವಾಲಯವೊಂದನ್ನು ಅರ್ಪಿಸಿದ್ದಾರೆ.

ಅಷ್ಟೇ ಅಲ್ಲದೆ ಗ್ರಾಮಸ್ಥರು ಅವರಿಗೆ ಆರತಿಯನ್ನು ಬೆಳಗುವ ಮೂಲಕ ತಮಗೆ ನಟನ ಮೇಲಿರುವ ಅಭಿಮಾನವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ‌. ನಟನನ್ನು ಗೌರವಿಸಲು ದುಬ್ಬಾ ತಾಂಡಾದ ಸ್ಥಳೀಯ ಜನರು ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ಇದನ್ನು ಮಾಡಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

“ಕರೋನಾ ಸಾಂಕ್ರಾಮಿಕ ರೋಗ ದೇಶದಲ್ಲಿ ತಾಂಡವವಾಡುತ್ತಿರುವ ಸಮಯದಲ್ಲಿ ಸೋನು ಸೂದ್ ಅವರು ಅನೇಕ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈಗ ನಾವು ಅವರ ದೇವಾಲಯವನ್ನು ನಿರ್ಮಿಸಿದ್ದೇವೆ ಎಂಬುದು ನಮಗೆ ಬಹಳ ಸಂತೋಷದ ಸಂಗತಿಯಾಗಿದೆ” ಎಂದು ಸ್ಥಳೀಯರೊಬ್ಬರು ಎಎನ್‌ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಕರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಸೋನು ಸೂದ್ ಸಾರ್ವಜನಿಕರಿಗಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಾಲ್ ರೆಡ್ಡಿ ಹೇಳಿದ್ದಾರೆ. “ಅವನು ತನ್ನ ಒಳ್ಳೆಯ ಕಾರ್ಯಗಳಿಂದ ದೇವರ ಸ್ಥಾನವನ್ನು ಪಡೆದಂತೆ, ನಾವು ಸೋನು ಸೂದ್ ಗಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ. ಅವರು ನಮಗೆ ದೇವರ ಸಮಾನ” ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಸೋನು ಸೂದ್ ವಿಗ್ರಹವನ್ನು ಶಿಲ್ಪಿ ಮಧುಸೂದನ್ ಪಾಲ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು “ನಟನು ತನ್ನ ಸಹಾಯಕ ಸ್ವಭಾವದಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾನೆ. ನಾನು ಅವನಿಗೆ ಒಂದು ಸಣ್ಣ ವಿಗ್ರಹವನ್ನು ಸಹ ಉಡುಗೊರೆಯಾಗಿ ರಚಿಸಿದ್ದೇನೆ” ಎಂದಿದ್ದಾರೆ.

error: Content is protected !!