fbpx

ನಡು ರಸ್ತೆಯಲ್ಲೇ ಯುವತಿಯ ಮೇಲೆ ಪಾಗಲ್ ಪ್ರೇಮಿಯ ಅಟ್ಟಹಾಸ! ಶಾಕಿಂಗ್ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆ

ಹುಬ್ಬಳ್ಳಿಯಲ್ಲಿ ಪ್ರೀತಿಸಿ ದೂರವಾಗಲು ಯತ್ನಿಸಿದ ಯುವತಿಗೆ ಹುಚ್ಚು ಪ್ರೇಮಿಯೊಬ್ಬ ಮಚ್ಚಿನಿಂದ ಕೊಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಘಟನೆ ನಡೆದಿದ್ದು ಯುವಕ ಯುವತಿಯ ಕುತ್ತಿಗೆಗೆ ತಲ್ವಾರ್ ಬೀಸಿದ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹುಚ್ಚು ಪ್ರೇಮಿಯನ್ನು ಇಮ್ತಿಯಾಜ್ ಎಂದು ಗುರುತಿಸಲಾಗಿದ್ದು, ಈತ ಬೆಳ್ಳಂಬೆಳಗ್ಗೆ ಯುವತಿಯ ಕೊಲೆಗೆ ಯತ್ನಿಸಿದ್ದಾನೆ. ಮಾಸ್ಕ್ ಹಾಕಿಕೊಂಡು ಬಂದು ಯುವತಿ ಮೇಲೆ ಮಚ್ಚಿನಿಂದ ದಾಳಿ ಮಾಡಿ ಹಲ್ಲೆ ನಡೆಸಿದ್ದಾನೆ.

ಆಟೋ ಚಾಲಕನಾಗಿರುವ ಇಮ್ತಿಯಾಜ್, ಕಳೆದ ಎರಡು ವರ್ಷಗಳಿಂದ ದೇಶಪಾಂಡೆ ನಗರದ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಇತ್ತೀಚೆಗೆ ಯುವತಿ ಪ್ರೇಮಿಯಿಂದ ದೂರವಾಗಲು ಯತ್ನಿಸಿದ್ದು ಈ ಹಿನ್ನೆಲೆಯಲ್ಲಿ ಕೋಪಗೊಂಡ ಯುವಕ ಮಚ್ಚಿನಿಂದ ಯುವತಿಯ ಕುತ್ತಿಗೆಗೆ ಮೂರು ಬಾರಿ ಹೊಡೆದಿದ್ದಾನೆ.

ಅದೇ ರಸ್ತೆಯಲ್ಲಿ ಬೈಕ್ ಮೂಲಕ ತೆರಳುತ್ತಿದ್ದ ಮಂಜುನಾಥ ಎಂಬವರು ಯುವತಿಯನ್ನು ಪಾಗಲ್ ಪ್ರೇಮಿಯ ಕೈಯಿಂದ ರಕ್ಷಣೆ ಮಾಡಿದ್ದಾರೆ. ಮಚ್ಚಿನ ದಾಳಿಯಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರೋಪಿಯನ್ನು ಉಪನಗರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!