fbpx

ನಾನು ಕರ್ನಾಟಕದ ಮುಖ್ಯಮಂತ್ರಿ, ನಾನು ಟಿಕೆಟ್ ತೆಗೊಳ್ಳಲ್ಲ! ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ಕಿರಿಕ್! ವೈರಲ್ ವಿಡಿಯೋ ನೋಡಿ

ಮಹಿಳೆಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ಕಿರಿಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಎಂಟಿಸಿ ಬಸ್ ಹತ್ತಿದ ಮಹಿಳೆ ಟಿಕೆಟ್ ಪಡೆಯದೆ ಜಗಳವಾಡಿದ್ದಾಳೆ.

ಪ್ರತಿದಿನ ಬಿಎಂಟಿಸಿ ಬಸ್ ಹತ್ತುವ ಮಹಿಳೆಯೊಬ್ಬರು ನಾನು ಟಿಕೆಟ್ ಪಡೆಯುವುದಿಲ್ಲ ಎಂದು ಕ್ಯಾತೆ ತೆಗೆದಿದ್ದು, ಕಂಡಕ್ಟರ್ ಟಿಕೆಟ್ ತಗೊಳ್ಳಿ ಮೇಡಂ ಎಂದು ಕೇಳಿಕೊಡಿದ್ದಾರೆ. ಆದರೆ ಮಹಿಳೆ, ನಾನು ಈ ರಾಜ್ಯದ ಮುಖ್ಯಮಂತ್ರಿ ಇದ್ದೇನೆ. ನನಗೆ ಅಥಾರಿಟಿ ಇದೆ ಎಂದು ಕಿರಿಕ್ ಮಾಡಿದ್ದಾಳೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಇಷ್ಟಕ್ಕೆ ಸುಮ್ಮನಾಗದ ಮಹಿಳೆ, “ನನಗೆ ಉಚಿತವಾಗಿ ಸಂಚಾರ ಮಾಡಲು ಹಕ್ಕಿದೆ. ನಾನು ಹೇಳಿದ ಕಡೆ ನೀವು ಕರೆದುಕೊಂಡು ಹೋಗಬೇಕಷ್ಟೆ. ನನ್ನನ್ನು ಬಿಟ್ಟು ಬೇಕಾದರೆ ಉಳಿದವರನ್ನ ಚೆಕ್ ಮಾಡಿ. ನಾನು ಯಾಕೆ ಟಿಕೆಟ್ ತೆಗೆದುಕೊಳ್ಳಲಿ” ಎಂದು ಅವಾಜ್ ಹಾಕಿದ್ದಾಳೆ.

ಇದೇ ಸಂದರ್ಭದಲ್ಲಿ ಲೈನ್ ಚೆಕ್ಕಿಂಗ್‌ಗೆ ಬಂದ ಬಿಎಂಟಿಸಿ ಸಿಬ್ಬಂದಿ ಜೊತೆಗೂ ಮಹಿಳೆ ಜಗಳಕ್ಕೆ ಇಳಿದಿದ್ದಾಳೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ತಡವಾಯ್ತು, ಟಿಕೆಟ್ ತಗೊಳ್ಳಿ ಎಂದು ಮಹಿಳೆಗೆ ಬುದ್ಧಿ ಹೇಳಿದ ನಂತರ ಹಣ ಕೊಟ್ಟು ಟಿಕೆಟ್ ಪಡೆದಿದ್ದಾಳೆ. ಇದೀಗ ಈ ವಿಡಿಯೋ ವೈರಲ್ ಆಗಿದೆ,

Watch Video

video

error: Content is protected !!