fbpx

Please assign a menu to the primary menu location under menu

ತಾಯಿಯ ನಿರ್ಲಕ್ಷ್ಯಕ್ಕೆ ರೈಲಿನಡಿಗೆ ಬಿದ್ದ ಮಗು! ಮುಂದೇನಾಯಿತು ನೋಡಿ ವೈರಲ್ ವಿಡಿಯೋ

ಪುಟ್ಟ ಕಂದಮ್ಮಗಳ ಮೇಲೆ ಎಷ್ಟೇ ಎಚ್ಚರವಹಿಸಿದರೂ ಸಾಲದು. ನಮ್ಮ ಗಮನ ಸ್ವಲ್ಪ ಅತ್ತಿತ್ತ ಸರಿದ್ರೂ ಮಕ್ಕಳ ಜೀವಕ್ಕೇ ಸಂಚಕಾರ ಬರಬಹುದು. ಅದೆಷ್ಟೋ ಪುಟ್ಟ ಮಕ್ಕಳು ಪ್ರಾಣ ಕಳೆದುಕೊಂಡಿರುವ ಘಟನೆಗಳು ಹಲವಾರು ಬಾರಿ ನಡೆದಿದೆ.

ಇದೇ ರೀತಿಯ ಘಟನೆಯೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೇ ನಿಲ್ದಾಣವೊಂದರಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದ್ದು, ತಾಯಿಯ ನಿರ್ಲಕ್ಷ್ಯದಿಂದಾಗಿ ಪುಟ್ಟ ಮಗುವೊಂದು ಆಟವಾಡುತ್ತಾ ರೈಲ್ವೆ ಹಳಿಗೆ ಬಿದ್ದ ದೃಶ್ಯ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರೈಲ್ವೆ ನಿಲ್ದಾಣಕ್ಕೆ ತಾಯಿಯೊಂದಿಗೆ ಆಗಮಿಸಿದ್ದ ಮೂರು ವರ್ಷದ ಪುಟ್ಟ ಮಗು ಆಯಾತಪ್ಪಿ ನಿಂತಿದ್ದ ರೈಲು ಹಾಗೂ ರೈಲ್ವೆ ಪ್ಲಾಟ್‌ಫಾರಂ ನಡುವೆ ಬಿದ್ದಿದೆ. ತಕ್ಷಣ ಅಲ್ಲಿದ್ದ ಸಹ ಪ್ರಯಾಣಿಕರು ಹಾಗೂ ರೈಲ್ವೇ ಸಿಬ್ಬಂದಿ ಮಗುವಿನ ರಕ್ಷಣೆಗೆ ಇಳಿದಿದ್ದಾರೆ.

ಬಹಳ ಪ್ರಯತ್ನಗಳ ಬಳಿಕ ರೈಲ್ವೇ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ರೈಲು ಚಲಿಸುತ್ತಿರುವ ಸಂದರ್ಭದಲ್ಲಿ ಮಗು ರೈಲ್ವೇ ಹಳಿಗೆ ಬಿದ್ದಿದ್ದರೆ ಪರಿಸ್ಥಿತಿಯೇ ಬೇರೆ ಇರುತ್ತಿತ್ತು. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!