ಹಸುವೊಂದು ತನ್ನ ತಲೆಯನ್ನು ಮರದ ಬೊಡ್ಡೆಯೊಳಗೆ ಸಿಲುಕಿಸಿಕೊಂಡು ನರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ಸಮಯಪ್ರಜ್ಞೆ ಮೆರೆದು ರಕ್ಷಣೆ ಮಾಡಿದ್ದಾರೆ.
ಮೇಯಲು ಬಿಟ್ಟಿದ್ದ ಹಸು ಆಯಾತಪ್ಪಿ ತನ್ನ ತಲೆಯನ್ನು ಮರದ ಬೊಡ್ಡೆಯೊಳಗೆ ಸಿಲುಕಿಸಿತ್ತು, ಆದರೆ ಬೊಡ್ಡೆಯೊಳಗೆ ಹೋದ ತಲೆಯನ್ನು ಹೊರತೆಗೆಯಲಾಗದೆ ಸಂಕಷ್ಟಪಟ್ಟಿದೆ. ಹಸುವಿನ ನರಕವೇದನೆಯನ್ನು ಕಂಡ ವ್ಯಕ್ತಿಯೊಬ್ಬರು ತಕ್ಷಣ ಹಸುವಿನ ರಕ್ಷಣೆಗೆ ಧಾವಿಸಿದ್ದಾರೆ.
ಕೊಡಲಿಯಿಂದ ಹಸು ಸಿಕ್ಕಿ ಹಾಕಿಕೊಂಡಿದ್ದ ಮರದ ಭಾಗಕ್ಕೆ ಕಡಿದು ಹಸುವನ್ನು ಬಿಡಿಸಲು ಯತ್ನಿಸಿದ್ದಾನೆ. ಮರಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆ ಹಸು ಬೆದರಿ ಅತ್ತಿತ್ತ ಅಲುಗಾಡಲು ಶುರುಮಾಡಿದೆ. ಸ್ವಲ್ಪ ಆಯತಪ್ಪಿದ್ರೂ ಕೊಡಲಿ ಏಟು ಹಸುವಿನ ತಲೆಗೆ ತಾಗುವ ಸಂಭವವಿತ್ತು.
ಆದರೂ ವ್ಯಕ್ತಿ ಬಹಳ ಚಾಣಾಕ್ಷತನದಿಂದ ಹಸುವನ್ನು ಮರದ ಬೊಡ್ಡೆಯಿಂದ ಬಿಡುಗಡೆಗೊಳಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವಿಡಿಯೋವನ್ನು ನೋಡಿ ಹಸುವನ್ನು ರಕ್ಷಣೆ ಮಾಡಿದ ವ್ಯಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Watch Video
