ಸರ್ಕಾರಿ ಬಸ್ಗೆ ದಾರಿ ಬಿಟ್ಟು ಕೊಡದೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಸವಾರನಿಗೆ ಇದೀಗ ಭಾರೀ ಮೊತ್ತದ ದಂಡ ಬಿದ್ದಿದೆ. ಘಟನೆ ನಡೆದಿರೋದು ಕೇರಳದಲ್ಲಿ.
ಕೇರಳದ ಕಣ್ಣೂರಿನಿಂದ ಕಾಸರಗೋಡಿಗೆ ಸಂಚರಿಸುವ ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗೆ ಬೈಕ್ ಸವಾರನೊಬ್ಬ ದುರುದ್ದೇಶದಿಂದ ಓವರ್ಟೇಕ್ ಮಾಡಲು ದಾರಿ ಬಿಟ್ಟು ಕೊಟ್ಟಿಲ್ಲ. ಬಸ್ ಚಾಲಕ ಎಷ್ಟೇ ಮನವಿ ಮಾಡಿಕೊಂಡ್ರೂ ಬೈಕ್ ಸವಾರ ರಸ್ತೆ ಮಧ್ಯದಲ್ಲಿಯೇ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿದ್ದಾನೆ.
ಬೈಕಿನ ವೇಗವನ್ನು ಕಡಿಮೆ ಮಾಡಿದ್ದಷ್ಟೇ ಅಲ್ಲದೆ ನಾಲ್ಕು ಕಿಲೋಮೀಟರ್ವರೆಗೆ ಇದೇ ರೀತಿ ಮಧ್ಯೆ ರಸ್ತೆಯಲ್ಲಿ ಸಾಗುವುದು, ಅಡ್ಡಾದಿಡ್ಡಿ ಬೈಕ್ ಓಡಿಸುವುದು ಮಾಡುತ್ತಲೇ ಇದ್ದ. ಬಸ್ ಚಾಲಕ ಎಷ್ಟೇ ಹಾರ್ನ್ ಮಾಡಿದ್ರೂ ಬೈಕ್ ಸವಾರ ದಾರಿ ಬಿಟ್ಟುಕೊಟ್ಟಿಲ್ಲ.
ಈ ಘಟನೆಯನ್ನು ಕೆಲ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಬೈಕಿನ ನಂಬರ್ ಪ್ಲೇಟ್ನ ಸಂಖ್ಯೆಯನ್ನೂ ವೈರಲ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೋಟಾರು ವಾಹನ ಇಲಾಖೆ ಬೈಕ್ ಸವಾರನ ಮನೆಗೆ ತೆರಳಿ ಕ್ಲಾಸ್ ತೆಗೆದುಕೊಂಡಿದೆ.
ಬೈಕ್ ಸವಾರನಿಗೆ ಬರೋಬ್ಬರಿ 10,500ರೂಪಾಯಿ ದಂಡ ವಿಧಿಸಿದೆ. ಈ ಮೂಲಕ ಅಡ್ಡಾದಿಡ್ಡಿ ಬೈಕ್ ಓಡಿಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಬೈಕ್ ಸವಾರನಿಗೆ ತಕ್ಕ ಪಾಠ ಕಲಿಸಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,
Watch Video
