fbpx

ಪೊಲೀಸರೊಂದಿಗೆ ತಳ್ಳಾಟದಲ್ಲಿ ಮುಗ್ಗರಿಸಿ ನೆಲಕ್ಕೆ ಬಿದ್ದ ರಾಹುಲ್ ಗಾಂಧಿ, ವಿಡಿಯೋ ನೋಡಿ

ಉತ್ತರಪ್ರದೇಶದ ಹಥ್ರಾಸ್‌ನಲ್ಲಿ 19ವರ್ಷದ ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಂತ್ರಸ್ತೆಯ ಕುಟುಂಬಸ್ತರನ್ನು ಭೇಟಿಯಾಗಲು ತೆರಳಿದ್ದ ರಾಹುಲ್ ಗಾಂಧಿಯನ್ನು ಉತ್ತರಪ್ರದೇಶ ಪೋಲೀಸರು ಅರ್ಧ ದಾರಿಯಲ್ಲೇ ತಡೆದು ವಾಪಾಸ್ ಕಳಿಸಿದ ಘಟನೆ ನಡೆದಿದೆ.

ಸಂತ್ರಸ್ತೆಯ ಕುಟುಂಬಸ್ತರ ಭೇಟಿಗೆ ದಿಲ್ಲಿ-ನೋಯ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಪಕ್ಷದ ಕಾರ್ಯಕರ್ತರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ರಾಹುಲ್ ಗಾಂಧಿಯನ್ನು ಅಡ್ಡಗಟ್ಟಿದ್ದಾರೆ. ಯಾವ ಉದ್ದೇಶದ ಮೇಲೆ ಅಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದು, ಈ ವೇಳೆ ನಡೆದ ಲಾಠಿಚಾರ್ಜ್ ಮತ್ತು ತಳ್ಳಾಟದಿಂದಾಗಿ ರಾಹುಲ್ ಗಾಂಧಿ ಮುಗ್ಗರಿಸಿ ಬಿದ್ದಿರುವುದಾಗಿ ವರದಿ ವಿವರಿಸಿದೆ.

ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಈ ಘಟನೆಯಿಂದಾಗಿ ಹಥ್ರಾಸ್‌ನಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಹೆಚ್ಚು ಜನ ಗುಂಪುಗೂಡಬಾರದು ಎಂದು ನಿಷೇಧಾಜ್ಞೆ ಹೇರಿದ್ದರೂ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರು ತಳ್ಳಾಟದಲ್ಲಿ ಮುಗ್ಗರಿಸಿ ಬಿದ್ದಿರುವ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಹುಲ್ ಗಾಂಧಿಯನ್ನು ತಡೆದ ಪೊಲೀಸರು ಹಿಡಿದು ಎಳೆದಾಡಿದ್ದಾರೆ, ಈ ವೇಳೆ ನಡೆದ ಘರ್ಷಣೆಯಲ್ಲಿ ರಾಹುಲ್ ಗಾಂಧಿ ಕೆಳಕ್ಕೆ ಬಿದ್ದಿದ್ದು, ಅಲ್ಲೇ ಇದ್ದ ಅಂಗರಕ್ಷಕರು ಹಾಗೂ ಕಾರ್ಯಕರ್ತರು ರಾಹುಲ್ ಗಾಂಧಿ ಸಹಾಯಕ್ಕೆ ಧಾವಿಸಿದ್ದಾರೆ.

ಇನ್ನು ಹಥ್ರಾಸ್ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದ ಬಲರಾಮ್‌ಪುರದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಗಂಭೀರ ಗಾಯಗೊಂಡಿದ್ದ ಬಾಲಕಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಪ್ರಕರಣದ ಸಂಬಂಧ ಅತ್ಯಾಚಾರಿಗಳಾದ ಶಾಹಿಲ್, ಶಾಹಿದ್ ಎಂಬವರನ್ನ ಬಂಧಿಸಲಾಗಿದೆ.

Watch Video

error: Content is protected !!