ಚೇಸಿಂಗ್ ಸೀನ್ಗಳನ್ನು ನಾವು ಹೆಚ್ಚಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಇದೀಗ ಸಿನಿಮಾಗಳನ್ನೂ ಮೀರಿಸುವಂತಹ ಚೇಸಿಂಗ್ ರಾಜಸ್ತಾನದಲ್ಲಿ ನಡೆದಿದೆ. ಟ್ರಕ್ ಒಂದನ್ನು ಹಿಡಿಯಲು ರಾಜಸ್ತಾನ ಪೋಲೀಸರು ಸುಮಾರು 70ಕಿಮೀ ಚೇಸ್ ಮಾಡಿದ್ದಾರೆ.
ಅತೀ ವೇಗದಿಂದ ಚಲಿಸುತ್ತಿದ್ದ ಟ್ರಕ್ ಇನ್ನೊಂದು ಟ್ರಕ್ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ಚಾಲಕ ಟ್ರಕ್ ನಿಲ್ಲಿಸೋದನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸುದ್ದಿ ಪೋಲೀಸರಿಗೆ ತಲುಪಿದ್ದು, ತಕ್ಷಣ ಪೋಲೀಸರು ಟ್ರಕ್ನ ಬೆನ್ನತ್ತಿದ್ದಾರೆ.
ಪೋಲೀಸರು ಎಷ್ಟೇ ಕೇಳಿಕೊಡ್ರು ಚಾಲಕ ಟ್ರಕ್ ನಿಲ್ಲಿಸಲು ನಿರಾಕರಿಸಿದ್ದಾನೆ. ಟ್ರಕ್ನಲ್ಲಿ ನಿಷೇಧಿತ ವಸ್ತು ಸಾಗಿಸುತ್ತಿರಬಹುದು ಎಂದು ಅನುಮಾನಗೊಂಡ ಪೋಲೀಸರು ಟ್ರಕ್ನ ಬೆನ್ನು ಬಿದ್ದು ಚೇಸ್ ಮಾಡಿದ್ದಾರೆ. ಪೋಲೀಸರು ತನ್ನ ಬೆನ್ನು ಬಿದ್ದಿದ್ದಾರೆ ಎಂದು ತಿಳಿದುಕೂಡ ಚಾಲಕ ಟ್ರಕ್ ನಿಲ್ಲಿಸೋದಿಲ್ಲ.
ಇದೇ ಸಂದರ್ಭದಲ್ಲಿ ಟ್ರಕ್ನ ಟೈರ್ ಪಂಚರ್ ಆಗಿದ್ದು, ಚಾಲಕ ಆದರೂ ಟ್ರಕ್ ನಿಲ್ಲಿಸೋದಿಲ್ಲ. ಅಡ್ಡಹಾಕಲಾಗಿದ್ದ ಬ್ಯಾರಿಕೇಡ್ಗಳಿಗೂ ಗುದ್ದಿಕೊಂಡೇ ಟ್ರಕ್ ಚಲಾಯಿಸಿದ್ದಾನೆ. ಪಂಚರ್ ಆಗಿದ್ದ ಟೈರ್ ಸವೆದು ರಿಮ್ ಮೂಲಕವೇ ಟ್ರಕ್ ಚಲಾಯಿಸಿದ್ದು ರಸ್ತೆಗಳು ಕಿತ್ತು ಹೋಗಿದೆ, ಇದರಿಂದ ಟ್ರಕ್ಗೂ ಬಾರೀ ಹಾನಿಯಾಗಿದೆ.
70ಕಿಮೀಗಳ ಚೇಸ್ ನಂತರ ಚಾಲಕ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಟ್ರಕ್ ಚಾಲಕನನ್ನು ಹಿಡಿಯಲು ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಸಹಕರಿಸಿದ್ದಾರೆ. ಈ ಚೇಸಿಂಗ್ ದೃಶ್ಯಗಳನ್ನು ಜನರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ವೈರಲ್ ಆಗಿದೆ.