fbpx

ಸುಂದರ ಯುವಕ ಏಲಿಯನ್ ಆಗಿ ಬದಲಾಗಿದ್ದು ಹೇಗೆ ಗೊತ್ತೇ? ವೈರಲ್ ವಿಡಿಯೋ ನೋಡಿ

ವ್ಯಕ್ತಿಯೊಬ್ಬ ತನ್ನ ಮೂಗಿಗೆ ಕತ್ತರಿ ಹಾಕಿಸಿ, ನಾಲಿಗೆಯನ್ನು ವಿಭಜಿಸಿ ಮತ್ತು ಕಣ್ಣುಗುಡ್ಡೆಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತನ್ನನ್ನು ‘ಕಪ್ಪು ಏಲಿಯನ್’ನಂತೆ ಪರಿವರ್ತಿಸಿಕೊಂಡಿದ್ದಾನೆ. ಫ್ರೆಂಚ್ ಮೂಲದ 32 ವರ್ಷದ ‘ಆಂಥೋನಿ ಲೋಫ್ರೆಡೋ’ ಎಂಬಾತನೆ ತನ್ನ ದೇಹದ ತುಂಬೆಲ್ಲ ಹಚ್ಚೆಗಳನ್ನು ಹಾಕಿಸಿಕೊಂಡು ತನ್ನನ್ನು ನಿಜ ಜೀವನದ ಏಲಿಯನ್ ರೀತಿ ಕಾಣುವಂತೆ ಮಾಡಿಕೊಂಡಿದ್ದಾನೆ.

ಈ ವಾರವಷ್ಟೇ ತನ್ನನ್ನು “ಕಪ್ಪು ಏಲಿಯನ್” ಆಗಿ ಪರಿವರ್ತಿಸಲು ಮೂಗಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ತೆಗೆದುಹಾಕಿದ್ದಾನೆ. ಫ್ರಾನ್ಸ್‌ನಲ್ಲಿ ಇದು ಕಾನೂನು ಬಾಹಿರವಾಗಿರೋದರಿಂದ ಇದಕ್ಕಾಗಿ ಬಾರ್ಸಿಲೋನಾ ಮೂಲದ ತಜ್ಞ ‘ಆಸ್ಕರ್ ಮಾರ್ಕ್ವೆಜ್‌ಗೆ’ ಭೇಟಿ ನೀಡಿ ಶಸ್ತ್ರಚಿಕಿತ್ಸೆ ಮಾಡಿಸಿ ಮೂಗು ಕತ್ತರಿಸಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಶಸ್ತ್ರಚಿಕಿತ್ಸೆ ಮಾಡಿದ ತಜ್ಞ “ರೈನೋಟಮಿ” ಎಂದು ಕರೆಯಲ್ಪಡುವ ಕಾರ್ಯವಿಧಾನದ ಮೂಲಕ ಮೂಗಿನ ಮೇಲ್ಬಾಗವನ್ನು ಕತ್ತರಿಸಿ ತೆಗೆದು ಕೇವಲ ರಂಧ್ರವನ್ನು ಬಿಟ್ಟಿದ್ದಾ‌ನೆ. ಈತ ಶಸ್ತ್ರಚಿಕಿತ್ಸೆ ಮಾಡಿಸುತ್ತಿರೋದು ಇದೇ ಮೊದಲಲ್ಲ, ಹಿಂದೆಯೂ ದೇಹದ ತುಂಬೆಲ್ಲ ಕತ್ತರಿ ಹಾಕಿಸಿದ್ದಾನೆ.

ಅನ್ಯಗ್ರಹದ ಜೀವಿಯಂತೆ ಕಾಣುವ ಸಲುವಾಗಿ ಆತ ತನ್ನ ಎರಡೂ ಕಿವಿಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿಸಿದ್ದಾನೆ, ನಾಲಗೆಯನ್ನು ಎರಡು ಹೋಳಾಗಿಸಿದ್ದಾ‌ನೆ, ದೃಷ್ಟಿ ಹೋಗುವ ಅಪಾಯವಿದ್ದರೂ ಕಣ್ಣಿಗೆ ಹಚ್ಚೆ ಹಾಕಿಸಿದ್ದಾನೆ, ಮುಖದ ತುಂಬೆಲ್ಲ ಚರ್ಮದ ಕಸಿ ಮಾಡಿಸಿದ್ದಾನೆ.

ಈಗಲೂ ಆತ ತನ್ನ ರೂಪಾಂತರದ ಬಗ್ಗೆ ವಿಷಾದಿಸುತ್ತಿಲ್ಲ. ನನಗೆ ಬಹಳ ಚಿಕ್ಕ ವಯಸ್ಸಿನಿಂದಲೂ ಮಾನವ ರೂಪಾಂತರಗಳ ಬಗ್ಗೆ ಆಸಕ್ತಿ ಹೊಂದಿದ್ದೇ. ನನ್ನ 24ನೇ ವಯಸ್ಸಿನಲ್ಲಿ ನಾನು ಬಯಸಿದ ರೀತಿಯಲ್ಲಿ ನನ್ನ ಜೀವನವನ್ನು ನಡೆಸುತ್ತಿಲ್ಲ ಎಂದು ನಾನು ಅರಿತುಕೊಂಡೆ. ಎಲ್ಲವನ್ನೂ ನಿಲ್ಲಿಸಿ ಆಸ್ಟ್ರೇಲಿಯಾಕ್ಕೆ ಹೊರಟೆ ಎಂದು ಹೇಳಿದ್ದಾರೆ.

Watch Video

video

error: Content is protected !!