fbpx

ಯೋಗಿ ಆದಿತ್ಯನಾಥ್ ಹತ್ಯೆಗೆ ಸಂಚು ರೂಪಿಸಿದ್ದವನ ಪರಿಸ್ಥಿತಿ ಏನಾಗಿದೆ ನೋಡಿ

ವಾಟ್ಸಪ್ ಸಂದೇಶದ ಮೂಲಕ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಭೂಪನನ್ನು ಹಜರತ್‌ಗಂಜ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಕಳೆದ 23ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಡಯಲ್ 112 ವಾಟ್ಸಪ್ ನಂಬರ್ಗೆ ಸಂದೇಶ ಕಳುಹಿಸಿದ್ದ ಆಸಾಮಿ, ಮುಂದಿನ 24ಗಂಟೆಗಳಲ್ಲಿ ಜೈಲಿನಲ್ಲಿರುವ ಬಿಎಸ್‌ಪಿ ನಾಯಕ ಮುಖ್ತಾರ್ ಅನ್ಸಾರಿ ಬಿಡುಗಡೆ ಮಾಡದೆ ಹೋದರೆ ಯೋಗಿ ಆದಿತ್ಯನಾಥ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ವಾಟ್ಸಪ್ ಸಂಖ್ಯೆ 112ಕ್ಕೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಸಭ್ಯ ಭಾಷೆ ಬಳಸಿ ನಿಂದಿಸಿದ್ದಷ್ಟೇ ಅಲ್ಲದೆ, ಬಿಎಸ್‌ಪಿ ನಾಯಕ ಮುಖ್ತಾರ್ ಅನ್ಸಾರಿ ವಿರುದ್ಧ ಕೈಗೊಂಡ ಕ್ರಮದ ಬಗ್ಗೆಯೂ ಬೆದರಿಕೆ ಹಾಕಿದ್ದ.

ಈ ಸಂಬಂಧ ಆರೋಪಿಯ‌ನ್ನು ಬಂಧಿಸಲಾಗಿದೆ, ಬಂಧಿತ ಆರೋಪಿಯನ್ನು ಇತಾಹ್ ಪ್ರದೇಶದ ನಿವಾಸಿ ಅಮರ್‌ಪಾಲ್ ಎಂದು ಗುರುತಿಸಲಾಗಿದೆ. ಆರೋಪಿಯ ಕೃತ್ಯದ ಹಿಂದೆ ಬೇರೆ ಯಾರದಾದರೂ ಕುಮ್ಮಕ್ಕು ಇದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಹಜರತ್‌ಗಂಜ್ ಎಸ್‌ಹೆಚ್‌ಒ ಅಂಜನಿ ಕುಮಾರ್ ಪಾಂಡೆ ತಿಳಿಸಿದ್ದಾರೆ.

error: Content is protected !!