fbpx

Please assign a menu to the primary menu location under menu

ಮಥುರೆಯ ಕೃಷ್ಣ ಜನ್ಮ ಭೂಮಿಯಲ್ಲಿರುವ ಅಕ್ರಮ ಮಸೀದಿ ತೆರವಿಗೆ ಕೋರ್ಟ್‌ನಲ್ಲಿ ದಾವೆ! ಇಲ್ಲಿದೆ‌ ಡಿಟೈಲ್ಸ್

ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಶಾಹಿ ಇದ್ಗಾ ಮಸೀದಿಯನ್ನು ತೆರವು ಮಾಡುವಂತೆ ಮನವಿ ಮಾಡಿ ವಕೀಲ ವಿಷ್ಣು ಜೈನ್ ಎಂಬವರು ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದ್ದಾಗಿದೆ. ಈ ಭೂಮಿಯ ಮೇಲೆ ಕೃಷ್ಣ ಭಕ್ತ ಹಿಂದೂ ಬಾಂಧವರು ಪೂಜನೀಯ ಭಾವವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಆದ್ದರಿಂದ ಮುಸ್ಲಿಮರಿಂದ‌ ಒತ್ತುವರಿಯಾಗಿರುವ ಜಾಗವನ್ನು ಸೇರಿಸಿ ಎಲ್ಲಾ 13.37 ಎಕರೆ ಜಾಗವನ್ನು ಹಿಂದೂಗಳಿಗೆ ನೀಡುವಂತೆ ಅವರು ಮನವಿ ಸಲ್ಲಿಸಿದ್ದಾರೆ. 1968ರಲ್ಲಿ ಈ ವಿಚಾರವಾಗಿ ನಡೆದ ರಾಜಿ ಪತ್ರವನ್ನು ಒಪ್ಪಲಾಗದು ಎಂದೂ ಅವರು ತಿಳಿಸಿದ್ದಾರೆ.

ಮೊಘಲ್ ಮತಾಂಧ ಔರಂಗಜೇಬ ಮಥುರೆಯ ಕೃಷ್ಣ ದೇಗುಲವನ್ನು ನಾಶಗೊಳಿಸಿದ ಬಗ್ಗೆ ಇತಿಹಾಸಗಳಲ್ಲಿ ಉಲ್ಲೇಖವಿದೆ. ಕೃಷ್ಣಾಲಯದ ಜೊತೆಗೆ ಇನ್ನಿತರ ದೇಗುಲಗಳನ್ನು ಆತ ನಾಶ ಮಾಡಿದ್ದ. ಈಗ ಇದ್ಗಾ ಮಸೀದಿ ಇರುವ ಪ್ರದೇಶವನ್ನು ಮತ್ತೆ ಹಿಂದೂಗಳಿಗೆ ನೀಡುವಂತೆ ಅವರು ತಮ್ಮ ದಾವೆಯಲ್ಲಿ ತಿಳಿಸಿದ್ದಾರೆ.

error: Content is protected !!