fbpx

ಹಲವು ಸಮಯಗಳ ನಂತರ ತನ್ನನ್ನು ನೋಡಲು ಬಂದ ಮಾವುತನನ್ನು ಕಂಡು ಈ ಆನೆ ಮಾಡಿದ್ದೇನು ನೋಡಿ! ವೈರಲ್ ವಿಡಿಯೋ

ಆನೆ ಮತ್ತು ಮಾವುತನ ನಡುವಣ ಪವಿತ್ರ ಸಂಬಂಧದ ವಿಡಿಯೋವೊಂದು ಈಗ ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಎಷ್ಟು ಸಲ ನೋಡಿದರೂ ಮನಸ್ಸು ತಣಿಯದು.

ಆನೆಯೊಂದು ಬಹಳ ಸಮಯಗಳ ನಂತರ ತನ್ನನ್ನು ನೋಡಲು ಬಂದ ಮಾವುತನ ಧ್ವನಿಯನ್ನು ಕೇಳುತ್ತಲೇ ಓಡೋಡಿ ಬಂದಿದೆ. ಮಾವುತನು ಅಷ್ಟೇ ‘ಹೇಗಿದ್ದೀಯ ಮಗಳೇ’ ಎಂದು ಆನೆಯನ್ನು ಕರೆಯುತ್ತಾನೆ.

ಮಾವುತನ ಕಂಡು ಓಡೋಡಿ ಬಂದರೂ ಹತ್ತಿರ ಬಂದು ಮಾಲೀಕನ ಮುಖ ನೋಡದೆ ಕೋಪದಿಂದ ತಿರುಗಿ ನಿಲ್ಲುತ್ತದೆ. ತನ್ನನ್ನು ನೋಡಲು ಬಹಳ ಸಮಯದಿಂದ ಬರದೆ ಈಗ ಬಂದಿದ್ದೀಯ ಎಂಬುದೇ ಆನೆಯ ಕೋಪಕ್ಕೆ ಕಾರಣವಿರಬಹುದೇನೋ. ಕೇರಳದಲ್ಲಿ ನಡೆದ ಈ ಘಟನೆಯ ವಿಡಿಯೋ ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧವ್ಯ ಹೇಗಿದೆ ಎಂಬುದನ್ನು ವಿವರಿಸುತ್ತದೆ.

ಇದು ಈಗಿನ ವಿಡಿಯೋ ಅಲ್ಲ. ಹಲವು ತಿಂಗಳಿಂದ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೂ ಎಷ್ಟು ಸಲ ಈ ಅಪೂರ್ವ ದೃಶ್ಯವನ್ನು ನೋಡಿದರೂ ಮನಸ್ಸು ತಣಿಯದು.

ಈಗಲೂ ಈ ವಿಡಿಯೋ ಮತ್ತೆ ಹಲವರ ಮನಗೆದ್ದಿದೆ. ಎಲ್ಲರೂ ಈ ವಿಡಿಯೋ ನೋಡಿ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!