ಕುಡಿದು ಗಾಡಿ ಓಡಿಸುವ ಪರಿಣಾಮ ವರ್ಷಂಪ್ರತಿ ಸಾವಿರಾರು ಜನ ಬಲಿಯಾಗುತ್ತಾರೆ. ಕುಡುಕರು ತಾವು ಸಾಯೋದಷ್ಟೇ ಅಲ್ಲದೆ ಅಪಘಾತದಿಂದ ಅಮಾಯಕರ ಜೀವವನ್ನು ಬಲಿ ಪಡೆಯುತ್ತಾರೆ.
ಇದೀಗ ಕುಡಿದ ಅಮಲಿನಲ್ಲಿ ಗಾಡಿ ಓಡಿಸಿ ಅಪಘಾತಕ್ಕೀಡಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದ ನಶೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ರಸ್ತೆಬದಿಯಲ್ಲಿ ಪಲ್ಟಿಯಾಗಿರುವ ವಿಡಿಯೋ ಇದಾಗಿದೆ.
ಕುಡಿದ ನಶೆ ಇಳಿಯದಿದ್ರೂ ವಾಹನಗಳು ಹೆಚ್ಚಾಗಿ ಓಡಾಡುತ್ತಿರುವ ರಸ್ತೆಯಲ್ಲಿಯೇ ತಮ್ಮ ದ್ವಿಚಕ್ರ ವಾಹನ ಚಲಾಯಿಸುವ ಸಾಹಸಕ್ಕೆ ಕುಡುಕರು ಕೈಹಾಕಿದ್ದಾರೆ. ಕುಡುಕರ ಆಯಸ್ಸು ಗಟ್ಟಿ ಇತ್ತು, ಗಾಡಿ ರಸ್ತೆಯ ಪಕ್ಕದಲ್ಲಿ ಪಲ್ಟಿ ಹೊಡೆದಿದೆ.
ಒಂದು ವೇಳೆ ಗಾಡಿ ಏನಾದರು ವಾಹನಗಳು ಓಡಾಡುವ ರಸ್ತೆಯ ಮೇಲೆ ಉರುಳಿ ಬಿದ್ದಿದ್ದರೆ ಕಥೆಯೇ ಬೇರೆ ಆಗಿರುತ್ತಿತ್ತು. ಕುಡುಕರ ಆವಾಂತರದ ವಿಡಿಯೋವನ್ನು ಹಿಂಬದಿ ಸಂಚರಿಸುತ್ತಿದ್ದ ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ವೈರಲ್ ಆಗಿದೆ.
Watch Video
