fbpx

ಲವ್‌ಜಿ’ಹಾದ್ ಬಲೆಗೆ ಬಿದ್ದು ಮದುವೆಯಾದ ತಿಂಗಳಲ್ಲೇ ಹಿಂದೂ ಯುವತಿಯ ತಲೆ ಕಡಿದು ಹತ್ಯೆಮಾಡಿದ ಮುಸ್ಲಿಂ ಗಂಡ! ಹತ್ಯೆಗೈಯಲು ಕಾರಣವೇನು ಗೊತ್ತೇ?

ಅನಾಗರಿಕ ಕೃತ್ಯವೊಂದರಲ್ಲಿ, 23 ವರ್ಷದ ಹಿಂದೂ ಯುವತಿಯನ್ನು ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ್ದರಿಂದ ಇಬ್ಬರು ಮುಸ್ಲಿಂ ಯುವಕರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಉತ್ತರ ಪ್ರದೇಶದ ಸೋನ್‌ಭದ್ರದಲ್ಲಿ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಉತ್ತರ ಪ್ರದೇಶದ ಚೋಪನ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರೀತ್‌ನಗರ ಸಮೀಪದ ಅರಣ್ಯ ಪ್ರದೇಶದಲ್ಲಿ ಪೋಲೀಸರಿಗೆ ಯುವತಿಯ ರುಂಡ-ಮುಂಡ ಬೇರ್ಪಟ್ಟ ಶವ ಸಿಕ್ಕಿದೆ. ಮೃತ ಯುವತಿಯನ್ನು ‘ಪ್ರಿಯಾ ಸೋನಿ’ ಎಂದು ಗುರುತಿಸಿಲಾಗಿದೆ.

ಸುಮಾರು ಒಂದೂವರೆ ತಿಂಗಳ ಹಿಂದೆ ಈಕೆ ಕುಟುಂಬದ ಇಚ್ಚೆಗೆ ವಿರುದ್ಧವಾಗಿ ಇಜಾಜ್ ಅಹ್ಮದ್ ಎಂಬ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾಳೆ ಎಂದು ಮೃತಳ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹತ್ಯೆಯಾದ ಯುವತಿಯ ತಂದೆಯ ಪ್ರಕಾರ, ಇಜಾಜ್ ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಅವಳ ಮೇಲೆ ಒತ್ತಡ ಹೇರುತ್ತಿದ್ದ, ಅದಕ್ಕೆ ಅವಳು ಒಪ್ಪಲಿಲ್ಲ. ಇದೇ ಕಾರಣಕ್ಕೆ ತಲೆ ಕಡಿದು ಹತ್ಯೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಇಜಾಜ್ ಆಕೆಯನ್ನು ಓಬ್ರಾ ಪ್ರದೇಶದ ಲಾಡ್ಜ್‌ನಲ್ಲಿ ಇಟ್ಟುಕೊಂಡಿದ್ದ ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಅವಳ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆಕೆ ಹಿಂದೂ ಧರ್ಮದಿಂದ ಇಸ್ಲಾಂ‌ಗೆ ಮತಾಂತರಗೊಳ್ಳಲು ನಿರಾಕರಿಸುತ್ತಿದ್ದಂತೆ, ಕೋಪಗೊಂಡ ಇಜಾಜ್ ತನ್ನ ಸ್ನೇಹಿತ ಶೋಯೆಬ್ ಅಖ್ತರ್‌ನ ಸಹಾಯದೊಂದಿಗೆ ಪ್ರಿಯಾಳನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ.

ಸೋಮವಾರದಂದು ಚೋಪನ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರೀತ್ ನಗರ ಬಳಿಯ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಶಿರಚ್ಚೇದವಾಗಿರುವ ಶವ ಪತ್ತೆಯಾಗಿದೆ ಎಂದು ಎಸ್ಪಿ ಆಶಿಶ್ ಶ್ರೀವಾಸ್ತವ ತಿಳಿಸಿದ್ದಾರೆ. ಪ್ರಿಯಾಳನ್ನು ಕೊಲೆ ಮಾಡಿದ ನಂತರ ಇಬ್ಬರು ಆರೋಪಿಗಳು ಓಡಿಹೋಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತಂಡಗಳನ್ನು ನಿಯೋಜಿಸಿದ್ದರು. ನಂತರ ಗುರುವಾರ ಮುಂಜಾನೆ ಬಾಗ್ಘಾ ನಲಾಪುಲ್ ಎಂಬಲ್ಲಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಮೃತ ಯುವತಿಯ ಮೊಬೈಲ್ ಫೋನ್ ಜೊತೆಗೆ ಹತ್ಯೆಗೆ ಬಳಸಿದ ಚಾಕು, ಕಬ್ಬಿಣದ ಸರಳು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭೀಕರವಾಗಿ ಹತ್ಯೆಗೈದ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನೂ ಜಾರಿಗೊಳಿಸಲಾಗುವುದು ಎಂದು ಎಸ್‌ಪಿ ಹೇಳಿದರು.

Watch Video

error: Content is protected !!