fbpx

Please assign a menu to the primary menu location under menu

ಆಟವಾಡುತ್ತಾ ಎರಡು ವರ್ಷದ ತಮ್ಮನನ್ನೇ ರೈಲಿನ ಅಡಿಗೆ ದೂಡಿದ ಅಣ್ಣ, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ರೈಲ್ವೇ ಹಳಿ ಬಳಿ ಮಕ್ಕಳನ್ನು ಆಟ ಆಡಲು ಬಿಡೋದು ಅವರ ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಇದೀಗ ಹರಿಯಾಣದ ಫರೀದಾಬಾದ್‌ನ ವಲ್ಲಭಗಢ ರೈಲ್ವೆ ನಿಲ್ದಾಣದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ.

ರೈಲ್ವೇ ಹಳಿ ಬಳಿ ಆಟವಾಡುವ ಸಂದರ್ಭದಲ್ಲಿ ಎರಡು ವರ್ಷದ ತಮ್ಮನನ್ನು ಹನ್ನೆರಡು ವರ್ಷದ ಅಣ್ಣನೇ ರೈಲ್ವೇ ಹಳಿಗೆ ದೂಡಿದ್ದಾನೆ. ಇದೇ ಸಂದರ್ಭದಲ್ಲಿ ಗೂಡ್ಸ್ ರೈಲು ಅದೇ ಹಳಿಯಲ್ಲಿ ಸಂಚರಿಸಿದ್ದು, ಮಗು ರೈಲಿನ ಅಡಿಯಲ್ಲಿ ಸಿಲುಕಿದೆ.

ಮಗು ರೈಲ್ವೇ ಹಳಿಯಲ್ಲಿ ಬಿದ್ದಿರೋದನ್ನು ಗಮನಿಸಿದ ಗೂಡ್ಸ್ ರೈಲು ಚಾಲಕ ತಕ್ಷಣ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾನೆ, ಅಷ್ಟರಲ್ಲಾಗಲೇ ಮಗುವಿನ ಮೇಲೆ ರೈಲಿನ ಎಂಜಿನ್ ದಾಟಿಯಾಗಿತ್ತು. ಮಗು ಸತ್ತೇ ಹೋಯಿತೆಂದು ಆತಂಕದಿಂದ ಕೆಳಗಿಳಿದ ರೈಲು ಚಾಲಕನಿಗೆ ಅಚ್ಚರಿ ಕಾದಿತ್ತು.

ರೈಲಿನ ಇಂಜಿನ್ ಕೆಳಗೆ ಮಗು ಯಾವುದೇ ಗಾಯಗಳಿಲ್ಲದೆ ಅಳುತ್ತಾ ನಿಂತಿತ್ತು. ತಕ್ಷಣ ಮಗುವನ್ನು ಹಳಿಯಿಂದ ರಕ್ಷಿಸಿದ ಗೂಡ್ಸ್ ಚಾಲಕ, ಮಗುವನ್ನು ರೈಲ್ವೇ ಹಳಿಗೆ ದೂಡಿದ ಆತನ ಅಣ್ಣನಿಗೆ ಎಚ್ಚರಿಕೆಯನ್ನೂ ನೀಡುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

ಇಷ್ಟೇ ಅಲ್ಲದೆ ಪುಟ್ಟ ಮಗುವನ್ನು ರೈಲ್ವೇ ಹಳಿಯಲ್ಲಿ ಆಡಲು ಬಿಟ್ಟು ನಿರ್ಲಕ್ಷ್ಯವಹಿಸಿದ ಮಗುವಿನ ಹೆತ್ತವರಿಗಾಗಿ ರೈಲ್ವೇ ಚಾಲಕರು ಬುದ್ದಿ ಹೇಳಿ ಮಗುವನ್ನು ಹಸ್ತಾಂತರಿಸಿದ್ದಾರೆ. ಸಮಯ ಪ್ರಜ್ಞೆ ಮೆರೆದು ಮಗುವಿನ ಜೀವ ಕಾಪಾಡಿದ ಗೂಡ್ಸ್ ರೈಲಿನ ಪೈಲಟ್ ದೀವಾನ್ ಸಿಂಗ್ ಮತ್ತು ಅಸಿಸ್ಟಂಟ್ ಪೈಲಟ್ ಅತುಲ್ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!