ಕೆಲದಿನಗಳ ಹಿಂದೆ ಕೇರಳದ ಕಾರು ಚಾಲಕನೊಬ್ಬನ ಪಾರ್ಕಿಂಗ್ ಸ್ಕಿಲ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತ ಕಾರು ಪಾರ್ಕಿಂಗ್ ಮಾಡಿದ ಜಾಗ ಜನರ ಆಕರ್ಷಣೆ ಕೇಂದ್ರ ಬಿಂದುವಾಗಿತ್ತು.
ಅದೇ ಜಾಗದಲ್ಲಿ ಅನೇಕರು ತಮ್ಮ ಕಾರುಗಳನ್ನು ನಿಲ್ಲಿಸುವ ಸಾಹಸಕ್ಕೆ ಕೈ ಹಾಕಿ ವಿಫಲವಾಗಿದ್ದರು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಎರಡು ಮರದ ದಿಣ್ಣಿಗಳ ಮೇಲೆ ತನ್ನ ಕಾರು ಚಲಾಯಿಸುವ ಸಾಹಸಕ್ಕೆ ಕೈ ಹಾಕಿದ್ದಾನೆ.
ನೀರು ಹೋಗುವ ಗುಂಡಿಯ ಮೇಲೆ ಕಾರು ದಾಟಿಸಲು ವ್ಯಕ್ತಿ ಕೇವಲ ಎರಡು ಮರದ ದಿಣ್ಣಿಗಳನ್ನು ಬಳಸಿದ್ದಾನೆ. ಮರದ ದಿಣ್ಣಿಗಳನ್ನು ನೀರು ಹೋಗುವ ತೋಡಿನ ಮೇಲೆ ಅಡ್ಡಲಾಗಿ ಇಟ್ಟು ಅದರ ಮೇಲೆ ತನ್ನ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ದಾಟಿಸಿದ್ದಾನೆ.
ಸ್ವಲ್ಪ ಆಯತಪ್ಪಿದ್ರು ಕಾರು ಗುಂಡಿಗೆ ಮಗುಚಿ ಬೀಳುವ ಸಾಧ್ಯತೆ ಇತ್ತು. ಆದರೆ ವ್ಯಕ್ತಿ ಯಾವುದೇ ಭಯವಿಲ್ಲದೆ ಕಾರನ್ನು ಚಲಾಯಿಸಿದ್ದಾನೆ. ವ್ಯಕ್ತಿಯ ಡ್ರೈವಿಂಗ್ ಸ್ಕಿಲ್ಗೆ ನೆಟ್ಟಿಗರು ಫಿದಾ ಆಗಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ.
Watch Video
