ಧ್ರುವಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾ ಬಿಡುಗಡೆಗೆ ಮೊದಲೇ ಸಾಕಷ್ಟು ಹವಾ ಸೃಷ್ಟಿಸಿರೋದು ನಿಮಗೆ ಗೊತ್ತೇ ಇದೆ. ಈ ಸಿನಿಮಾದ ಖರಾಬು ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದೆ.
ಈ ಹಾಡು ಬಿಡುಗಡೆಯಾದ ನಂತರ ಇಲ್ಲಿಯವರೆಗೆ ಕೋಟ್ಯಾಂತರ ಮಂದಿಯಿಂದ ವೀಕ್ಷಣೆಗೆ ಒಳಗಾಗಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಪುಟಾಣಿ ಮಗು ಇದೇ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪೊಗರು ಸಿನಿಮಾದ ‘ಅಣ್ಣ ಬಂದ ಬಾಸು ಬಂದ ಎಲ್ರೂ ಎರಡು ಸ್ಟೆಪ್ ಹಾಕಿ’ ಹಾಡಿಗೆ ಪುಟ್ಟ ಬಾಲಕ ಡಾನ್ಸ್ ಮಾಡಿದ್ದಾನೆ. ಡಾನ್ಸ್ ಜೊತೆಗೆ ಆತನ ನಗುಮೊಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಬಾಲಕನ ಡ್ಯಾನ್ಸ್ಗೆ ಬಾಲಿವುಡ್ ನಟ ರಿತೇಶ್ ದೇಶ್ಮುಖ್, ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ ಸೇರಿ ಸಾಕಷ್ಟು ಜನ ಮೆಚ್ಚುಗೆ ಸೂಚಿಸಿದ್ದಾರೆ.
Watch Video
