fbpx

Please assign a menu to the primary menu location under menu

ಏರ್ಪೋರ್ಟ್ ‌ಲಗೇಜ್ ಕನ್ವೇಯರ್‌ನಲ್ಲಿ ಜಾಲಿ ರೈಡ್ ಹೊರಟ ಮಗು, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ಪುಟ್ಟ ಮಕ್ಕಳ ಮೇಲೆ ಎಷ್ಟೇ ಎಚ್ಚರ ವಹಿಸಿದರೂ ಸಾಲದು, ಕೆಲವೊಮ್ಮೆ ನಮ್ಮ ಸಣ್ಣ ನಿರ್ಲಕ್ಷ್ಯ ಕೂಡ ಅವುಗಳ ಜೀವಕ್ಕೆ ಕಂಟಕವಾಗಿ ಪರಿಣಮಿಸುತ್ತೆ. ಅಂತಹದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಯಿಯ ಜೊತೆ ಏರ್ಪೋರ್ಟ್‌ಗೆ ಬಂದಿದ್ದ ಮಗು ಮಾಡಿದ ಆವಾಂತರಕ್ಕೆ ಇಡೀ ಏರ್ಪೋರ್ಟ್ ಸಿಬ್ಬಂದಿಯೇ ಹೌಹಾರಿಹೋಗಿದ್ದಾರೆ. ವಿಮಾನ ಏರಲು ತಾಯಿಯ ಜೊತೆ ಏರ್ಪೋರ್ಟ್‌ಗೇ ಬಂದಿದ್ದ ಮಗು, ತಾಯಿಯ ಕೈಯಿಂದ ತಪ್ಪಿಸಿಕೊಂಡು ಲಗೇಜ್ ಹೋಗುವ ಕನ್ವೇಯರ್ ಬೆಲ್ಟ್ ಹತ್ತಿ ಜಾಲಿ ರೈಡ್ ಹೋಗಿದೆ.

ಘಟನೆ ನಡೆದಿರೋದು ಅಮೇರಿಕಾದ ಅಟ್ಲಾಂಟಾದಲ್ಲಿರುವ ಹಾರ್ಟ್ಸ್‌ಫೀಲ್ಡ್-ಜಾಕ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ತಾಯಿ ಬೋರ್ಡಿಂಗ್ ಪಾಸ್‌ಗಾಗಿ ಟಿಕೆಟ್ ಕೌಂಟರ್‌ನಲ್ಲಿ ನಿಂತಿರುವಂತೆಯೇ ಮಗು ಯಾರಿಗೂ ಗೊತ್ತಾಗದಂತೆ ಲಗೇಜ್ ಹೋಗುವ ಕನ್ವೇಯರ್ ಹತ್ತಿದೆ.

ಮಗು ಕನ್ವೇಯರ್ ಒಳಗೆ ಹೋಗಿದ್ದನ್ನು ಕಂಡ ತಾಯಿ ಓಡಿ ಬಂದು ಏರ್ಪೋರ್ಟ್ ಸಿಬ್ಬಂದಿಗೆ ತಿಳಿಸಿದ್ದು, ಅಷ್ಟರಲ್ಲಾಗಲೇ ಮಗು ಕನ್ವೇಯರ್‌ನ ಇನ್ನೊಂದು ಬದಿಗೆ ಹೋಗಿಯಾಗಿತ್ತು. ಮಗು ಲಗೇಜ್‌ಗಳ ಜೊತೆ ಸ್ಕ್ಯಾನಿಂಗ್ ಮಿಷೀನ್‌ಗಳನ್ನೂ ದಾಟಿ ಲಗೇಜ್ ಸ್ಟೋರ್‌ರೂಂಗೆ ಹೋಗಿದೆ‌.

ಅತ್ತ ಲಗೇಜ್‌ಗಳನ್ನು ವಿಮಾನಕ್ಕೆ ತುಂಬಿಸುವ ಸಿಬ್ಬಂದಿಗೆ ಲಗೇಜ್‌ಗಳ ಜೊತೆ ಮಗು ಬರುತ್ತಿರೋದನ್ನ ನೋಡಿ ಶಾಕ್ ಆಗಿದೆ. ತಕ್ಷಣ ಏರ್ಪೋರ್ಟ್‌ನ ಅಂಬ್ಯುಲೆನ್ಸ್ ಕರೆಸಿ, ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸದ್ಯ ಮಗುವಿನ ಜಾಲಿ ರೈಡ್‌ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ‌. ಕೆಲವರು ತಾಯಿಯ ನಿರ್ಲಕ್ಷ್ಯತನಕ್ಕೆ ಕಿಡಿಕಾರಿದ್ರೆ, ಇನ್ನು ಕೆಲವರು ಮಗುವಿನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!