fbpx

ಮನೆ ದೋಚಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್! ವೈರಲ್ ವಿಡಿಯೋ ನೋಡಿ

ನಾಯಿಗಳು ನಿಯತ್ತಿಗೆ ಹೆಸರಾಗಿರುವ ಪ್ರಾಣಿಗಳು. ನಾವು ಹಾಕಿದ ಅನ್ನದ ಋಣ ಯಾವತ್ತಿಗೂ ಮರೆಯೋಲ್ಲ. ಇದೀಗ ಸಾಕು ನಾಯಿಯೊಂದರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೆಯೊಂದಕ್ಕೆ ಕನ್ನ ಹಾಕಲು ಯತ್ನಿಸುವ ಸಂದರ್ಭದಲ್ಲಿ ಕಳ್ಳ ಸಾಕು ನಾಯಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ ಎಂದು ಖಚಿತಪಡಿಸಿಕೊಂಡ ಕಳ್ಳ ಮೆಲ್ಲನೆ ಮನೆಯ ಅಂಗಳಕ್ಕೆ ಪ್ರವೇಶಿಸುತ್ತಾನೆ. ಸುತ್ತಮುತ್ತ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಕಳ್ಳ ಯಾವುದೇ ತೊಂದರೆ ಇಲ್ಲ ಎಂದು ಖಚಿತವಾಗುತ್ತಿದ್ದಂತೆ ಕಳ್ಳತನಕ್ಕೆ ಸಿದ್ದವಾಗುತ್ತಾನೆ‌.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಇನ್ನೇನು ಮನೆಯೊಳಗೆ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಂತೆ ಎಲ್ಲಿಂದಲೋ ಬಂದ ‌ಸಾಕುನಾಯಿ ಕಳ್ಳನ ಮೇಲೆರಗಿದೆ. ಕಳ್ಳನ ಮೇಲೆ ದಾಳಿ ಮಾಡಿದ ನಾಯಿ ಆತ ಎಷ್ಟೇ ಹಲ್ಲೆನಡೆಸಿದ್ರೂ ಆತನನ್ನು ತಪ್ಪಿಸಿಕೊಂಡು ಹೋಗದಂತೆ ಮಾಡಿದೆ.

ಸ್ವಲ್ಪ ಹೊತ್ತಿನ ಬಳಿಕ ಮನೆಯ ಇನ್ನಷ್ಟು ನಾಯಿಗಳು ಓಡಿ ಬಂದಿದ್ದು, ಕಳ್ಳನಿಗೆ ದಿಕ್ಕೇ ತೋಚದಂತಾಗಿದೆ. ಕಳ್ಳ ಎಷ್ಟೇ ಪ್ರಯತ್ನಪಟ್ಟರೂ ನಾಯಿಯ ಹಿಡಿತದಿಂದ ಆತನಿಗೆ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲ್ಲ.

ಹೀಗೆ ನಾಯಿಯ ಜೊತೆ ಕಾದಾಡಿ ಕೊನೆಗೆ ಹೇಗೋ ಪ್ರಾಣ ಉಳಿಸಿಕೊಂಡು ತಪ್ಪಿಸಿಕೊಂಡು ಓಡಿದ್ದಾನೆ. ಅನ್ನ ಹಾಕಿದ ಋಣಕ್ಕೆ ನಾಯಿ ತನ್ನ ಮಾಲೀಕನ ಮನೆಯನ್ನು ಕಳ್ಳತನವಾಗೋದರಿಂದ ರಕ್ಷಿಸಿದೆ. ಘಟನೆಯ ಎಲ್ಲಾ ದೃಶ್ಯಗಳು ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಖತ್ ವೈರಲ್ ಆಗಿದೆ.

Watch Video

video

error: Content is protected !!