fbpx

ವಿಡಿಯೋ ಮಾಡುವಂತೆ ಮಗನಿಗೆ ಹೇಳಿ ನದಿಗೆ ಜಿಗಿದ ವ್ಯಕ್ತಿ! ಶಾಕಿಂಗ್ ವಿಡಿಯೋ ನೋಡಿ

ವ್ಯಕ್ತಿಯೊಬ್ಬರು ಮಗನ ಕಣ್ಣ ಮುಂದೆಯೇ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು ವ್ಯಕ್ತಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಅರವತ್ತು ವರ್ಷದ ದುರ್ಗಾ ಪ್ರಸಾದ್ ಎಂದು ಗುರುತಿಸಲಾಗಿದ್ದು, ಸಹೋದರನ ಮಗನ ಜೊತೆ ಕನಕದುರ್ಗಾ ಸೇತುವೆಗೆ ಆಗಮಿಸಿದ್ದಾರೆ. ನಾನು ನದಿಗೆ ಪೂಜೆ ಮಾಡುತ್ತೇನೆ, ನೀನು ವಿಡಿಯೋ ರೆಕಾರ್ಡ್ ಮಾಡು ಎಂದು ಮೊಬೈಲನ್ನು ಮಗನ ಕೈಗಿತ್ತು ಸೇತುವೆ ಮೇಲೆ ನಿಂತು ಸ್ವಲ್ಪ ಹೊತ್ತು ಮಂತ್ರಪಠಿಸಿದ್ದಾರೆ.

ಮಗನಿಗೆ ಸ್ವಲ್ಪ ದೂರಕ್ಕೆ ಸರಿಯುವಂತೆ ಹೇಳಿ ಸೇತುವೆಯ ತಡೆಗೋಡೆ ಏರಿ ನದಿಗೆ ಹಾರಿದ್ದಾರೆ. ಮಳೆಯಿಂದಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಮಗನ ಕಣ್ಣೆದುರೆ ದುರ್ಗಾ ಪ್ರಸಾದ್ ಕೊಚ್ಚಿ ಹೋಗಿದ್ದಾರೆ‌‌.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗನ ಕೈಯಲ್ಲಿದ್ದ ಮೊಬೈಲ್ ಜೊತೆ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು, ಅನಾರೋಗ್ಯದ ಕಾರಣ ಆತ್ಮಹತ್ಯೆ ಶರಣಾಗಿದ್ದಾಗಿ ಡೆತ್‌ನೋಟಲ್ಲಿ ಬರೆದಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗಿರುವ ದುರ್ಗಾ ಪ್ರಸಾದ್ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

Watch Video

error: Content is protected !!