ಧೂಮಪಾನದಿಂದ ಕ್ಯಾನ್ಸರ್ ಬರುತ್ತೆ ಎಂದು ಎಷ್ಟೇ ಜಾಗೃತಿ ಮೂಡಿಸಿದ್ರು ಜನರು ಸಿಗರೇಟ್ ಸೇವನೆಯನ್ನು ಬಿಡೋದೆ ಇಲ್ಲ. ಇದಕ್ಕಾಗಿಯೇ ಸಾಕಷ್ಟು ಬ್ರಾಂಡ್ಗಳ, ವಿವಿಧ ಪ್ಲೇವರ್ಗಳ ಸಿಗರೇಟ್ಗಳು ಮಾರುಕಟ್ಟೆಯಲ್ಲಿದೆ.
ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಏಡಿಯೊಂದು ಸಿಗರೇಟ್ ಸೇದುವ ವಿಡಿಯೋ ಇದಾಗಿದೆ. ಯಾರೋ ಎಳೆದು ಎಸೆದ ಸಿಗರೇಟ್ ಅನ್ನು ಏಡಿ ಎಳೆಯುತ್ತಿರುವ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,
Watch Video
