fbpx

ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಕಿರುಚಾಡಿ ರಂಪಾಟ ಮಾಡಿದ ಮಹಿಳೆ! ವೈರಲ್ ವಿಡಿಯೋ ನೋಡಿ

ಕೆಲ‌ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ‘ಹಿಂದಿ ದಿವಸ್’ ಆಚರಣೆಯ ವಿರುದ್ಧ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆದಿದ್ದವು. ಹಿಂದಿ ಹೇರಿಕೆಯನ್ನು ಕನ್ನಡ ಸಂಘಟನೆಗಳು ಹಾಗೂ ಅನೇಕ‌ ಸಂಘಸಂಸ್ಥೆಗಳು ಖಂಡಿಸಿದ್ದು ಬೀದಿಗಿಳಿದು ಪ್ರತಿಭಟಿಸಿದ್ದವು ಅಲ್ಲದೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು.

ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಮಹಿಳೆಯೊಬ್ಬಳು ಕನ್ನಡದ ಬಗ್ಗೆ ಅವ್ಯಾಚ್ಯವಾಗಿ ನಿಂದಿಸಿದ ವಿಡಿಯೋ ಇದಾಗಿದೆ. ಭಾನುವಾರದಂದು ಬೆಂಗಳೂರಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ ಸಿಬ್ಬಂದಿ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಮಹಿಳೆ ಅವರ ಮೇಲೆಯೇ ರೇಗಾಡಿದ್ದಾಳೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಕನ್ನಡದಲ್ಲಿ ಮಾತಾಡುವಂತೆ ಕೇಳಿಕೊಂಡ ಸಿಬ್ಬಂದಿಯನ್ನು ಅವ್ಯಾಚ್ಯವಾಗಿ ನಿಂದಿಸಿದ್ದಲ್ಲದೆ, ಕನ್ನಡ ಭಾಷೆಯ ಬಗ್ಗೆಯೂ ನಿಂದಿಸಿದ ಮಹಿಳೆ ಕನ್ನಡವನ್ನು ‘ಬುಲ್ ಶಿಟ್’ ಭಾಷೆ ಎಂದು ಅವಹೇಳನ ಮಾಡಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!