fbpx

ತಾಯಿ ಬರೋದು ಒಂದು ನಿಮಿಷ ತಡವಾಗಿದ್ರೂ ಮಗುವಿನ ಪ್ರಾಣವೇ ಹೋಗ್ತಾ ಇತ್ತು! ಶಾಕಿಂಗ್ ವಿಡಿಯೋ ನೋಡಿ

ಸಣ್ಣ ಮಕ್ಕಳ ಮೇಲೆ ಎಷ್ಟೇ ಎಚ್ಚರ ವಹಿಸಿದರೂ ಸಾಲದು, ಕೆಲವೊಮ್ಮೆ ನಮ್ಮ ಸಣ್ಣ ನಿರ್ಲಕ್ಷ್ಯ ಕೂಡ ಅವುಗಳ ಜೀವಕ್ಕೆ ಕಂಟಕವಾಗಿ ಪರಿಣಮಿಸುತ್ತೆ. ಅಂತಹದೇ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುಟ್ಟ ಮಗುವೊಂದು ಆಟವಾಡುವ ಸಂದರ್ಭದಲ್ಲಿ ಅಲ್ಲೇ ಇದ್ದ ನೀರಿನ ತೊಟ್ಟಿಯ(ಪ್ಲಾಸ್ಟಿಕ್ ಡ್ರಂ) ಮೇಲೇರಿ ಅದರೊಳಕ್ಕೆ ಇಣುಕಲು ಯತ್ನಿಸಿದೆ. ಆದರೆ ಆಯತಪ್ಪಿ ತಲೆಕೆಳಗಾಗಿ ಅದರೊಳಕ್ಕೆ ಬಿದ್ದುಬಿಟ್ಟಿದೆ. ಎಷ್ಟೇ ಪ್ರಯತ್ನ ಪಟ್ಟರೂ ಅದಕ್ಕೆ ಅದರಿಂದ ಹೊರಬರಲಾಗುವುದಿಲ್ಲ.

ಪ್ಲಾಸ್ಟಿಕ್ ಡ್ರಂ ನೊಳಗೆ ನೀರಿದ್ದ ಕಾರಣ ಮಗುವಿಗೆ ಉಸಿರಾಡಲೂ ಆಗದೆ, ಹೊರಬರಲೂ ಆಗದೆ ಕಷ್ಟಪಟ್ಟಿದೆ. ಸುಮಾರು ಒಂದು ನಿಮಿಷಗಳ ಕಾಲ ಒದ್ದಾಡಿದ ಮಗುವಿನ ಉಸಿರೇ ನಿಂತು ಹೋಯಿತು ಅನ್ನೋ ಹೊತ್ತಿಗೆ ಎಲ್ಲೋ ಇದ್ದ ತಾಯಿ ಓಡೋಡಿ ಬಂದು ಮಗುವನ್ನು ನೀರಿನ ತೊಟ್ಟಿಯಿಂದ ಮೇಲಕ್ಕೆತ್ತಿದ್ದಾಳೆ‌.

ತಾಯಿ ಬರೋದು ಸ್ವಲ್ಪ ತಡವಾಗಿದ್ದರು ಮಗು ಪ್ರಾಣವನ್ನೇ ಕಳೆದುಕೊಳ್ಳುತ್ತಿತ್ತೇನೋ. ದೇವರ ದಯೆಯಿಂದ ಸರಿಯಾದ ಸಮಯಕ್ಕೆ ತಾಯಿ ಬಂದ ಕಾರಣ ಮಗುವಿನ ಜೀವ ಉಳಿದಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!