fbpx

Please assign a menu to the primary menu location under menu

ಗೂಳಿಯ ಜೊತೆ ಮೇಕೆಯ ಕಾಳಗ, ಕೊನೆಗೆ ಗೆದ್ದಿದ್ಯಾರು ನೋಡಿ! ವೈರಲ್ ವಿಡಿಯೋ

ಮೇಕೆಯೊಂದು ತನಗಿಂತ ಬಹಳ ದೊಡ್ಡದಾದ ಗೂಳಿಯ ಜೊತೆ ಕಾಳಗಕ್ಕೆ ಇಳಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನಡು ರಸ್ತೆಯಲ್ಲಿ ಎರಡು ಪ್ರಾಣಿಗಳು ಕಾದಾಡುತ್ತಿರೋದನ್ನು ಅಲ್ಲಿದ್ದ ಜನರು ತಮ್ಮ ಮೊಬೈಲ್‌ಗಳ ಮೂಲಕ ಸೆರೆ ಹಿಡಿದಿದ್ದಾರೆ.

ಮೇಕೆಯನ್ನು ಗೂಳಿ ಎಷ್ಟೇ ಬಾರಿ ದೂರಕ್ಕೇ ಅಟ್ಟಿದ್ರೂ ಅದು ಛಲ ಬಿಡದೇ ಮತ್ತೆ ಮತ್ತೆ ಗೂಳಿಯ ಜೊತೆ ಕಾದಾಟಕ್ಕೆ ಇಳಿಯುತ್ತೆ. ಗೂಳಿಗೆ ಹೋಲಿಸಿದರೆ ಮೇಕೆ ದೇಹದಲ್ಲಿ ಸಣ್ಣದಾಗಿದ್ದರೂ, ಅದರ ಧೈರ್ಯ ಮಾತ್ರ ಮೆಚ್ಚುವಂತದ್ದು. ಈ ಎರಡು ಪ್ರಾಣಿಗಳ ನಡುವಿನ ಹೋರಾಟವು ಸಾಕಷ್ಟು ಆಸಕ್ತಿದಾಯಕವಾಗಿದೆ.

ವಿಡಿಯೋ ಕೊನೆಯಲ್ಲಿ ಮೇಕೆಯ ಜೊತೆ ಹೊಡೆದಾಡಲು ಸಾಧ್ಯವಾಗದೇ ಗೂಳಿಯೇ ಅಲ್ಲಿಂದ ಪಲಾಯನ ಮಾಡಿದೆ. ವಿಡಿಯೋ ನೋಡಿದ ಅನೇಕರು ಮೇಕೆಯ ಧೈರ್ಯವನ್ನು ಮೆಚ್ಚಿ ಕಮೆಂಟ್ ಮಾಡಿದ್ದಾರೆ.

ನಮ್ಮ ಜೀವನದಲ್ಲಿ ಎದುರಾಗಬಹುದಾದ ದೊಡ್ಡ ದೊಡ್ಡ ತೊಂದರೆಗಳನ್ನು ಎದುರಿಸಲು ಗೂಳಿ-ಮೇಕೆಯ ಈ ವಿಡಿಯೋ ನಮಗೆ ಸ್ಫೂರ್ತಿಯಾಗಬಹುದು. ಈ ಎರಡು ಪ್ರಾಣಿಗಳ ನಡುವಿನ ಯುದ್ಧವು ಜೀವನದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಲು ಮನುಷ್ಯರನ್ನು ಪ್ರೇರೇಪಿಸುತ್ತದೆ.

ಸಣ್ಣ ತೊಂದರೆ ಬಂದರೂ ಸಾಕು ಆತ್ಮಹತ್ಯೆಯ ಮೊರೆ ಹೋಗುವ ಜನರಿಗೆ ಈ ವಿಡಿಯೋದಿಂದ ಕಲಿಯೋದು ಬಹಳಷ್ಟಿದೆ. ನಮ್ಮಿಂದ ಆಗಲ್ಲ ಎಂದು ಕೈಕಟ್ಟಿ ಕೂರೋ ಬದಲು ಧೈರ್ಯದಿಂದ ಎದುರಿಸಿದರೆ ಬೆಟ್ಟದಂತಹ ಕಷ್ಟಗಳೂ ಸರಾಗವಾಗಿ ಕರಗಿಹೋಗಬಹುದು. ಗೂಳಿ-ಮೇಕೆಯ ಕಾಳಗದ ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!