fbpx

ಬೈಕ್ ಸವಾರ ದೇವರಂತೆ ಬಂದು ಮಗುವನ್ನು ಕಾಪಾಡಿದ ಅದ್ಭುತ ದೃಶ್ಯ! ವೈರಲ್ ವಿಡಿಯೋ ನೋಡಿ

ಈ ಮೊಬೈಲ್ ಯುಗದಲ್ಲಿ ಜನ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಂತೆ ವರ್ತಿಸುವ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಜನ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಅವರ ರಕ್ಷಣೆ ಮಾಡೋ ಬದಲು ತಮ್ಮ ಮೊಬೈಲ್‌ನಿಂದ ಆ ದೃಶ್ಯಗಳನ್ನು ಸೆರೆಹಿಡಿದು ವೈರಲ್ ಮಾಡುವ ಹುಚ್ಚು ಸಾಕಷ್ಟು ಜನರಿಗೆ ಇದೆ.

ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಬೈಕ್ ಸವಾರನೊಬ್ಬ ದೇವರಂತೆ ಬಂದು ಮಗುವನ್ನು ಕಾಪಾಡಿದ ವಿಡಿಯೋ ಇದಾಗಿದೆ. ಎಳೆಗೂಸು ಕೂತಿದ್ದ ‘ಬೇಬಿ ವಾಕರ್’ ತಾಯಿಯ ಕೈ ತಪ್ಪಿ ಇಳಿಜಾರಿನಲ್ಲಿ ವೇಗವಾಗಿ ಸಾಗಿದೆ.

ಇನ್ನೇನು ‘ಬೇಬಿ ವಾಕರ್’ ಪಲ್ಟಿಯಾಗಿ ಮಗು ನೆಲಕ್ಕೆ ಅಪ್ಪಳಿಸಬೇಕು ಅನ್ನುವಷ್ಟರಲ್ಲಿ, ಅದೇ ರಸ್ತೆಯಲ್ಲಿ ಬಂದ ಬೈಕ್ ಸವಾರ ತನ್ನ ಬೈಕ್ ಅನ್ನು ನಿಲ್ಲಿಸಿ ಓಡಿ ಮಗುವನ್ನು ರಕ್ಷಿಸಿದ್ದಾನೆ. ಸವಾರ ತನ್ನ ಬೈಕ್‌ ಬಿದ್ದರೂ ಅದರ ಬಗ್ಗೆ ಚಿಂತಿಸದೆ ಮಗುವನ್ನು ರಕ್ಷಿಸುವ ಮೂಲಕ ಪ್ರಾಣಪಾಯದಿಂದ ಪಾರು ಮಾಡಿದ್ದಾನೆ.

ಈ ಹಿಂದೆಯೂ ‘ಬೇಬಿ ವಾಕರ್’ ನಿಂದ ಸಂಭವಿಸಿದ ದುರ್ಘಟನೆಯಿಂದ ಸಾಕಷ್ಟು ಎಳೆಗೂಸುಗಳು ಸಾವಿಗೀಡಾಗಿವೆ. ಆದರೆ ಇಲ್ಲಿ ಬೈಕ್ ಸವಾರನ ಸಮಯಪ್ರಜ್ಞೆ ಮಗುವಿನ ಪ್ರಾಣ ಕಾಪಾಡಿದೆ.

ಪುಟ್ಟ ಮಕ್ಕಳನ್ನು ಬೇಬಿ ವಾಕರ್, ತ್ರಿಚಕ್ರ ಸೈಕಲ್‌ನಲ್ಲಿ ಕೂರಿಸಿ ವಾಯುವಿಹಾರಕ್ಕೆ ಹೋಗುವಾಗ ಹೆತ್ತವರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಳಿಜಾರು ಪ್ರದೇಶಗಳಲ್ಲಿ ಸ್ವಲ್ಪ ಗಮನ ತಪ್ಪಿದ್ರೂ ಬಾರೀ ದುರಂತ ಸಂಭವಿಸುವ ಸಾಧ್ಯತೆಗಳಿರುತ್ತೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!