ಬೈಕ್ ವೀಲಿಂಗ್ ಹುಚ್ಚಾಟಕ್ಕೆ ವರ್ಷಂಪ್ರತಿ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಪುಂಡಪೋಕರಿಗಳು ಮಾಡುವ ಹುಚ್ಚಾಟಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಅಮಾಯಕರು ಬಲಿಯಾದ ಬಹಳಷ್ಟು ಘಟನೆಗಳು ನಡೆದಿದೆ.
ಟ್ರಾಫಿಕ್ ನಿಯಮಗಳು ಎಷ್ಟೇ ಕಠಿಣ ಆದ್ರೂ, ಪೋಲೀಸರು ಎಷ್ಟೇ ಎಚ್ಚರಿಕೆ ನೀಡಿದ್ರು ಈ ಪುಂಡರಿಗೆ ಬುದ್ದಿ ಬರೋದಿಲ್ಲ. ಇದೀಗ ಇಂತಹದ್ದೇ ಬೈಕ್ ವೀಲಿಂಗ್ ಹುಚ್ಚಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಯುವಕ ಬೈಕ್ ವೀಲಿಂಗ್ ಮಾಡುವಾಗ ಹಿಂಬದಿ ಕುಳಿತಿದ್ದ ಯುವತಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಬಿಂದಾಸ್ ಆಗಿ ಪೋಸ್ ನೀಡಿದ್ದಾಳೆ.
ಸಿನಿಮಾಗಳಲ್ಲಿ ಕಾಣಸಿಗುವ ಇಂತಹ ದೃಶ್ಯಗಳನ್ನು ಜನ ಸಾಮಾನ್ಯರು ಓಡಾಡೋ ರಸ್ತೆಯಲ್ಲಿ ಕಂಡು ಜನ ಶಾಕ್ಗೆ ಒಳಗಾಗಿದ್ದಾರೆ. ಕೂಡಲೇ ಪೊಲೀಸರು ಬೈಕ್ ಅನ್ನು ಪತ್ತೆಹಚ್ಚಿ ಆ ಯುವಕ ಹಾಗೂ ಯುವತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವಿಡಿಯೋ ನೋಡಿ,
Watch Video
