fbpx

Please assign a menu to the primary menu location under menu

ತನ್ನ ಬಲೆಗೆ ಬಿದ್ದ ಹಕ್ಕಿಯನ್ನೇ ತಿಂದು ತೇಗಿದ ಜೇಡ! ವೈರಲ್ ವಿಡಿಯೋ ನೋಡಿ

ಪ್ರಕೃತಿಯಲ್ಲಿ ದಿನಂಪ್ರತಿ ಸಾಕಷ್ಟು ವಿಸ್ಮಯಗಳು, ಕುತೂಹಲಕಾರಿ ವಿಷಯಗಳು ನಡೆಯುತ್ತಿರುತ್ತೆ. ಇದೀಗ ಇಂತಹದ್ದೇ ವಿಸ್ಮಯಕಾರಿ, ಕುತೂಹಲ ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ನಾವು ಹಕ್ಕಿಗಳು ಕೀಟಗಳನ್ನು ತಿನ್ನೋದ‌‌ನ್ನ ನೋಡಿರುತ್ತೇವೆ. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಕ್ಕಿಯೇ ಜೇಡವೊಂದಕ್ಕೆ ಆಹಾರವಾಗಿದೆ.

ತನ್ನ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ತನಗಿಂತ ದೊಡ್ಡ ಗಾತ್ರದ ಹಕ್ಕಿಯನ್ನು ಜೇಡ ತಿನ್ನುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘Nature is scary’ ಎನ್ನುವ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಹಕ್ಕಿಯನ್ನು ತಿನ್ನುತ್ತಿರುವ ಜೇಡವು ‘ಅವಿಕುಲೇರಿಯಾ’ ಜಾತಿಗೆ ಸೇರಿದ್ದಾಗಿದ್ದು, ಇದು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಜೇಡವು ಹಕ್ಕಿಯನ್ನು ತಿನ್ನುತ್ತಿರುವ ವಿಸ್ಮಯಕಾರಿ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!