fbpx

ನೋಡನೋಡುತ್ತಿದ್ದಂತೆ ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌‌ಗಳ ಮೇಲೆ ಹರಿದ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗಳ ಮೇಲೆ ಲಾರಿಯೊಂದು ಹರಿದಿರುವ ಭೀಕರ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 10ಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಏಕಾಏಕಿ ಬಂದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಟ್ರಾಫಿಕ್ ಸಿಗ್ನಲ್ ಹಾಕಿದ್ದ ಕಾರಣ ಬೈಕ್ ಸವಾರರು ಸಿಗ್ನಲ್ ಬಳಿ ತಮ್ಮ ಬೈಕ್ ನಿಲ್ಲಿಸಿ ಗ್ರೀನ್ ಸಿಗ್ನಲ್ ಬೀಳಲು ಕಾಯುತ್ತಿದ್ದರು. ಆದರೆ ಅಷ್ಟರಲ್ಲೇ ಅಲ್ಲಿಗೆ ಜವರಾಯ ಲಾರಿಯ ರೂಪದಲ್ಲಿ ಆಗಮಿಸಿ ಬೈಕ್‌ಗಳ ಮೇಲೆ ಹರಿದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ಗಳು ಚೆಲ್ಲಾಪಿಲ್ಲಿಯಾಗಿ ಹೋಗಿದೆ.

ಘಟನೆಯಲ್ಲಿ 6 ಬೈಕ್ ಸವಾರರು ಸ್ಥಳದಲ್ಲೇ ಗಾಯಗೊಂಡ್ರೆ, 20ಕ್ಕೂ ಹೆಚ್ಚು ಸವಾರರು ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಲಾರಿ ಚಾಲಕನ ಅಜಾಗರುಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ.

ಘಟನೆ ನಡೆದಿರೋದು ವಿಯೇಟ್ನಾಂ‌ನ ಬೆನ್ ಲುಕ್ ಜಿಲ್ಲೆಯಲ್ಲಿ. ಕಳೆದ ವರ್ಷ ಜನವರಿಯಲ್ಲಿ ನಡೆದ ಈ ಭೀಕರ ಅಪಘಾತದ ವಿಡಿಯೋ ಮತ್ತೆ ವೈರಲ್ ಆಗಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಭೀಕರ ಅಪಘಾತ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!