fbpx

ಅಂದದ ಗುಲಾಬಿ ಮೇಲೆ ಚೆಂದದ ಹಾವು, ಹತ್ತಿರ ಹೋದರೆ ಗ್ಯಾರಂಟಿ ಸಾವು! ವೈರಲ್ ವಿಡಿಯೋ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ನೀಲಿ ಬಣ್ಣದ ಹಾವಿನ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಹಾವುಗಳು ನಿಸರ್ಗದಲ್ಲಿ ಕಾಣ ಸಿಗೋದು ವಿರಳ, ಹೆಚ್ಚಾಗಿ ಪ್ರಾಣಿ ಸಂಗ್ರಹಾಲಯಗಳಲ್ಲಿ ಕಾಣಬಹುದಾಗಿದೆ.

ಗುಲಾಬಿಯನ್ನು ಸುತ್ತವರಿದು ಕುಳಿತಿರುವ ಈ ಹಾವನ್ನು ನೋಡಿದ್ರೆ ಮನಸ್ಸಿಗೆ ಮುದ ನೀಡುತ್ತದೆ. ಹಾಗಂತ ಈ ಹಾವಿನ ಹತ್ತಿರ ಹೋದರೆ ಸಾವು ಗ್ಯಾರಂಟಿ. ನೋಡೋಕೆ ಅಂದವಾಗಿ ಕಾಣುವ ಈ ಹಾವುಗಳು ಬಲು ವಿಷಕಾರಿಯಾಗಿವೆ.

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ಹಾವಿನ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಸಖತ್ ವೈರಲ್ ಆಗಿದೆ. ಕೇವಲ 12 ಸೆಕೆಂಡ್‌ಗಳ ಈ ವಿಡಿಯೋವನ್ನು ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!