fbpx

ಫೇಮಸ್ ಆಗಲು ಜೀವಂತ ಆಕ್ಟೋಪಸ್ ತಿನ್ನಲು ಹೋದ್ಲು, ಮುಂದಾಗಿದ್ದು ಮಾತ್ರ ಬೇರೇನೆ! ವೈರಲ್ ವಿಡಿಯೋ ನೋಡಿ

ಚೀನೀಯರು ಸಿಕ್ಕಸಿಕ್ಕ ಪ್ರಾಣಿಗಳನ್ನು ತಿನ್ನುವುದರಲ್ಲಿ ನಿಸ್ಸೀಮರು, ಜಿರಳೆ ಕಪ್ಪೆಯಿಂದ ಹಿಡಿದು ನಾಯಿ ಬೆಕ್ಕುಗಳೂ ಕೂಡ ಇವರ ಆಹಾರದ ಲಿಸ್ಟ್‌ನಲ್ಲಿ ಬರುತ್ತೆ. ಕೊರೋನಾದಂತಹ ಮಹಾಮಾರಿ ವೈರಸ್ ಕೂಡ ಹುಟ್ಟಿದ್ದು ಚೀನಾದ ವುಹಾನ್‌ನ ಹಸಿ ಮಾಂಸದ ಮಾರುಕಟ್ಟೆಯಲ್ಲಿ ಎಂದು ಕೇಳಿಬಂದಿತ್ತು.

ಆದರೂ ಚೀನೀಯರಿಗೆ ಬುದ್ದಿ ಬಂದಂತೆ ಕಾಣಿಸುತ್ತಿಲ್ಲ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಚೀನಾದ ಯುವತಿಯೊಬ್ಬಳು ಟಿಕ್‌ಟಾಕ್‌ನಲ್ಲಿ ಫೇಮಸ್ ಆಗುವ ಹುಚ್ಚಿಗೆ ಜೀವಂತ ಆಕ್ಟೋಪಸ್ ಅನ್ನು ತಿನ್ನಲು ಹೋಗಿ ಪೇಚಿಗೆ ಸಿಲುಕಿದ್ದಾಳೆ.

ಜೀವಂತ ಆಕ್ಟೋಪಸ್ ಅನ್ನು ಖರೀದಿಸಿ ತಂದ ಯುವತಿ ಟಿಕ್‌ಟಾಕ್ ವಿಡಿಯೋಗಾಗಿ ಅದನ್ನು ಜೀವಂತವಾಗೇ ತಿನ್ನಲು ಹೋಗಿದ್ದಾಳೆ. ಆದರೆ ಯುವತಿಯ ಗ್ರಹಚಾರ ಕೆಟ್ಟಿತ್ತು, ಆಕ್ಟೋಪಸ್ ಆಕೆಯ ಮುಖಕ್ಕೆ ಗಟ್ಟಿಯಾಗಿ ಅಂಟಿ ಕೂತಿದೆ‌.

ಯುವತಿ ಎಷ್ಟೇ ಎಳೆದ್ರು ಅದನ್ನು ಮುಖದಿಂದ ತೆಗೆಯಲು ಆಗುತಿರಲಿಲ್ಲ. ಕೊನೆಗೆ ಹೇಗೋ ಕಷ್ಟಪಟ್ಟು ಅದನ್ನು ಮುಖದಿಂದ ತೆರವುಗೊಳಿಸಿದ್ದಾಳೆ. ಅಷ್ಟರಲ್ಲಾಗಲೇ ಅದು ಆಕೆಯ ಮುಖದಲ್ಲಿ ಗಾಯಗಳನ್ನು ಮಾಡಿಯಾಗಿತ್ತು.

ಯುವತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ‌. ಜೀವಂತವಾಗಿ ತಿನ್ನಲು ಹೋಗಿದ್ದಕ್ಕೆ ಆಕ್ಟೋಪಸ್ ಆಕೆಗೆ ತಕ್ಕ ಪಾಠ ಕಲಿಸಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!