fbpx

Please assign a menu to the primary menu location under menu

ಸಾಕು ಬೆಕ್ಕಿಗೆ ಅದ್ದೂರಿ ಸೀಮಂತ ಕಾರ್ಯ ನೆರವೇರಿಸಿದ ಕುಟುಂಬ, ವೈರಲ್ ವಿಡಿಯೋ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗೋ ಹುಚ್ಚಿಗೆ ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗೋದು, ಹತ್ಯೆಗೈಯೋ ವಿಡಿಯೋ ಮಾಡಿ ಹರಿಬಿಡುವ ಕ್ರೂರ ಜನರನ್ನು ನಾವು ನೋಡಿರುತ್ತೇವೆ‌. ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ನೀರಿಗೆ ಎಸೆದು ವಿಡಿಯೋ ಮಾಡಿ ಹರಿಬಿಟ್ಟಿದ್ದ (Post Link).

ಇನ್ನೊಂದು ಇಂತಹದ್ದೆ ವಿಡಿಯೋದಲ್ಲಿ ಮಹಿಳೆಯೊಬ್ಬಳು ನಾಯಿ ಮರಿಯೊಂದನ್ನು ಕಾಲಿನಿಂದ ತುಳಿದು ಹತ್ಯೆ ಮಾಡಿದ್ದಳು (Post Link). ಇದನ್ನೆಲ್ಲಾ ನೋಡಿದರೆ ಮನುಷ್ಯ ತನ್ನ ಮನುಷ್ಯತ್ವವನ್ನು ಸಂಪೂರ್ಣ ಕಳೆದುಕೊಂಡಿದ್ದಾನೆ ಎಂದು ಅನ್ನಿಸದೆ ಇರದು‌.

ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಕುಟುಂಬವೊಂದು ತಮ್ಮ ಸಾಕು ಬೆಕ್ಕಿಗೆ ಸೀಮಂತ ಕಾರ್ಯ ನೆರವೇರಿಸಿದ ವಿಡಿಯೋ ಇದಾಗಿದೆ‌. ತಮಿಳುನಾಡಿನ ಪುದುಚೆರಿಯ ಕುಟುಂಬವೊಂದು ತಮ್ಮ ಮನೆಯ ಗರ್ಭಿಣಿ ಸಾಕು ಬೆಕ್ಕಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ನಡೆಸಿದೆ.

ಹಿಂದೂ ಧರ್ಮದ ಪ್ರಕಾರ ಗರ್ಭಿಣಿ ಮಹಿಳೆಯರಿಗೆ ಯಾವ ರೀತಿ ಸೀಮಂತ ಕಾರ್ಯ ನೆರವೇರಿಸಲಾಗುತ್ತೋ, ಎಲ್ಲವನ್ನೂ ಗರ್ಭಿಣಿ ಬೆಕ್ಕಿಗೂ ನೆರವೇರಿಸಿದ್ದಾರೆ. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬೆಕ್ಕಿಗೆ ತಿನ್ನಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

Watch Video

video
error: Content is protected !!