fbpx

ಪ್ರಧಾನಿ ಮೋದಿಯನ್ನೇ ಮೋಡಿ ಮಾಡಿದ ಕರಾವಳಿ ಯುವಕನ ವಿಶಿಷ್ಟ ಕಲೆ! ವೈರಲ್ ವಿಡಿಯೋ ನೋಡಿ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 70ನೇ ಹುಟ್ಟುಹಬ್ಬವನ್ನು ಸೆಪ್ಟೆಂಬರ್ 17ರ ಗುರುವಾರ ಆಚರಿಸಿಕೊಂಡಿದ್ದಾರೆ. ಪ್ರಧಾನಿಯವರಿಗೆ ದೇಶವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಶುಭಾಶಯಗಳ ಸುರಿಮಳೆ ಹರಿದುಬಂದಿದೆ.

ಇದೀಗ ಕರಾವಳಿಯ ಯುವಕನೊಬ್ಬ ಪ್ರಧಾನಿಯವರ ಹುಟ್ಟುಹಬ್ಬಕ್ಕೆ ವಿಡಿಯೋವೊಂದನ್ನು ಟ್ವೀಟ್ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿ ಸುದ್ದಿಯಾಗಿದ್ದಾರೆ. ಇವರ ಕಲೆಯನ್ನು ನೋಡಿ ಸ್ವತಃ ಪ್ರಧಾನಿ ಮೋದಿಯವರೇ ಫಿದಾ ಆಗಿದ್ದು, ರಿಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಶಿ ಅಡ್ಕಾರ್ ಎಂಬವರು ಅಶ್ವತ್ಥ ಎಲೆಯಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿದ್ದು, ಪ್ರಧಾನಿಯವರ ಭಾವಚಿತ್ರವನ್ನು ಅದರಲ್ಲಿ ಬಿಡಿಸಿದ್ದಾರೆ. ಅಶ್ವತ್ಥ ಎಲೆಯನ್ನು ಕತ್ತರಿಸಿ ಪ್ರಧಾನಿಯವರ ಚಿತ್ರವನ್ನು ರಚಿಸುವ ಮೂಲಕ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ 70ನೇ ವರ್ಷದ ಜನ್ಮ ದಿನದ ಅಂಗವಾಗಿ ಮೋದಿ ಚಿತ್ರವನ್ನು ಅಶ್ವತ್ಥ ಎಲೆಯಲ್ಲೇ ರೂಪಿಸಿದ್ದು, ಅದನ್ನು ಶಶಿ ಅವರ ಸಹೋದರ ಸಂದೇಶ್‌ ಅಡ್ಕಾರ್‌ ಅವರು ಪ್ರಧಾನಿಯವರಿಗೆ ಟ್ವೀಟ್‌ ಮಾಡಿದ್ದರು. ಇದು ಪ್ರಧಾನಿ ಮೋದಿಯ ಗಮನ ಸೆಳೆದಿದ್ದು, ರಿಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಒಂದೇ ದಿನದಲ್ಲಿ ಸುಮಾರು 10ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!