fbpx

ಕುಡುಕ ಕಾರು ಚಾಲಕನ ಆವಾಂತರಕ್ಕೆ ಅಮಾಯಕ ಬಲಿ, ಭೀಕರ ಅಪಘಾತದ ವಿಡಿಯೋ ವೈರಲ್

ಕುಡಿದು ಗಾಡಿ ಓಡಿಸುವ ಪರಿಣಾಮ ವರ್ಷಂಪ್ರತಿ ಸಾವಿರಾರು ಜನ ಬಲಿಯಾಗುತ್ತಾರೆ. ಕುಡುಕರು ತಾವು ಸಾಯೋದಷ್ಟೇ ಅಲ್ಲದೆ ಅಮಾಯಕರ ಜೀವವನ್ನು ಬಲಿ ಪಡೆಯುತ್ತಾರೆ‌. ಇದೀಗ ಇಂತಹದ್ದೇ ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ‌.

ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದ ವಿಡಿಯೋ ಇದಾಗಿದ್ದು, ಮದ್ಯದ ಅಮಲಿನಲ್ಲಿ ಕಾರು ಚಾಲಕ ನಡೆಸಿದ ಅಪಘಾತಕ್ಕೆ ಅಮಾಯಕ ಯುವಕ ಬಲಿಯಾಗಿದ್ದಾನೆ.

ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಕಾರು ಚಾಲಕ ಸಿಗ್ನಲ್‌ನಲ್ಲಿ ನಿಂತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಕಾರು ಚಾಲಕ ಮದ್ಯದ ಅಮಲಿನ ಜೊತೆ ಡ್ರಗ್ಸ್ ಸೇವಿಸಿರೋ ಬಗ್ಗೆ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಅಪಘಾತದ ವಿಡಿಯೋ ಸಿಗ್ನಲ್ ಬಳಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,, ಅಪಘಾತದ ತೀವ್ರತೆ ಎಷ್ಟಿತ್ತು ಎಂದು ತಿಳಿಯಬಹುದಾಗಿದೆ. ಕುಡುಕ ಕಾರು ಚಾಲಕನನ್ನು ರೋಹಿತ್ ಕೇಡಿಯಾನ ಎಂದು ಗುರುತಿಸಲಾಗಿದ್ದು, ವಿಲ್ಸನ್ ಗಾರ್ಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಕಿರಣ್(23) ಎಂದು ಗುರುತಿಸಲಾಗಿದ್ದು, ಇನ್ಸೂರೆನ್ಸ್ ಕಂಪನಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಿರಣ್ ಚಲಾಯಿಸುತ್ತಿದ್ದ ಸ್ಕೂಟರ್ ಎರಡು ಕಾರುಗಳ ನಡುವೆ ಸಿಕ್ಕು ಅಪ್ಪಚ್ಚಿಯಾಗಿದೆ. ಇದರಲ್ಲಿ ಸಿಕ್ಕಿಹಾಕಿಕೊಂಡ ಕಿರಣ್ ತೀವ್ರರಕ್ತಸ್ತ್ರಾವದ ಕಾರಣ ಮೃತಪಟ್ಟಿದ್ದಾನೆ‌‌.

ವಿಲ್ಸನ್‌ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಬಂದಿತ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ. ಭೀಕರ ಅಪಘಾತದ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!