fbpx

ಅತ್ಯಾಚಾರಿಗಳ ವೃಷಣಕ್ಕೆ ಕತ್ತರಿ! ಯಾವ ದೇಶದಲ್ಲಿ ಜಾರಿಯಾಗಿದ್ದು ಗೊತ್ತೇ ಈ ಕಾನೂನು? ಇಲ್ಲಿದೆ ಡಿಟೈಲ್

ಅತ್ಯಾಚಾರ ಅರೋಪಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು ಎಂದು ಭಾರತದಲ್ಲಿ ಆಗಾಗ ಕೂಗು ಕೇಳಿ ಬರುತ್ತಿರುತ್ತೆ. ಆದರೆ ಇಂದಿಗೂ ಅಂತಹ ಯಾವುದೇ ಕಠಿಣ ಶಿಕ್ಷೆ ಭಾರತದಲ್ಲಿ ಜಾರಿಯಾಗಿಲ್ಲ. ಇಂದಿಗೂ ಪ್ರತಿನಿತ್ಯ ಹತ್ತಾರು ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ನಡೆಯುತ್ತಿರುತ್ತೆ.

ಅರಬ್ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳನ್ನು ಕಲ್ಲು ಹೊಡೆದು ಸಾಯಿಸೋದು, ಗಲ್ಲಿಗೆ ಹಾಕೋದು, ಗುಂಡಿಟ್ಟು ಕೊಲ್ಲೋದು, ಶಿರಚ್ಚೇದನ ಮುಂತಾದ ಶಿಕ್ಷೆಗೆ ಒಳಪಡಿಸಲಾಗುತ್ತೆ. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಇದೀಗ ನೈಜೀರಿಯಾದಲ್ಲಿ ಅತ್ಯಾಚಾರ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಜಾರಿ ಮಾಡಲಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ನೈಜೀರಿಯಾದ ಕಡುನಾ ಎಂಬ ರಾಜ್ಯದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಹೊಸ ಕಾನೂ‌ನು ಜಾರಿಗೊಳಿಸಲಾಗಿದ್ದು, ಆ ಶಿಕ್ಷೆಗೆ ಒಳಪಡುವ ಅತ್ಯಾಚಾರಿ ಮತ್ತೆಂದೂ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ. ಅತ್ಯಾಚಾರಿಗಳ ವೃಷಣವನ್ನೇ ಕತ್ತರಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ.

ಒಂದು ವೇಳೆ 14 ವರ್ಷದ ಒಳಗಿನವರ ಮೇಲೆ ಅತ್ಯಾಚಾರ ನಡೆಸಿದರೆ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ಕಾಯಂಗೊಳಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ನಾಸಿರ್ ಅಹ್ಮದ್ ಎಲ್-ರುಫಾಯಿ ಈ ಕಾನೂನಿಗೆ ಅಂಕಿತ ಹಾಕಿದ್ದಾರೆ.

error: Content is protected !!