fbpx

Please assign a menu to the primary menu location under menu

ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಈ ವ್ಯಕ್ತಿ ಮಾಡಿದ್ದೇನು ನೋಡಿ, ವೈರಲ್ ವಿಡಿಯೋ

ಈ ಮೊಬೈಲ್ ಯುಗದಲ್ಲಿ ಕಣ್ಣ ಮುಂದೆಯೇ ಮನುಷ್ಯನ ಪ್ರಾಣ ಹೋಗುತ್ತಿದ್ದರು ಸಹಾಯ ಮಾಡೋರು ಕಮ್ಮಿ, ಅಂತದ್ದರಲ್ಲಿ ಇಲ್ಲೊಬ್ಬರು ನೀರಿನಲ್ಲಿ ಕೊಚ್ಚಿಹೋಗಲಿದ್ದ ಮೂಕ ಪ್ರಾಣಿಯ ಜೀವ ಕಾಪಾಡಲು ತಮ್ಮ ಪ್ರಾಣವನ್ನೆ ಪಣಕ್ಕಿಟ್ಟಿದ್ದಾರೆ.

ತೆಲಂಗಾಣದ ಹೋಮ್ಗಾರ್ಡ್‌ ಮುಜೀದ್ ಎಂಬುವವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ಭಾರೀ ಮಳೆಯಿಂದಾಗಿ ಕಾಲುವೆಯಲ್ಲಿ ರಭಸದಿಂದ ನೀರು ಹರಿಯುತ್ತಿತ್ತು. ಕಾಲುವೆಯ ಪಕ್ಕದ ಪೊದೆಯಲ್ಲಿ ನಾಯಿ ಸಿಲುಕಿತ್ತು. ಸ್ವಲ್ಪ ಮಿಸುಕಾಡಿದ್ರೂ ನಾಯಿ ಕಾಲುವೆಯ ನೀರಿನ ರಭಸಕ್ಕೆ ಕೊಚ್ಚಿಹೋಗುವ ಸಂಭವವಿತ್ತು.

ಜೆಸಿಬಿ ಸಹಾಯದಿಂದ ನಾಯಿಯ ಪ್ರಾಣ ಕಾಪಾಡಲು ತೆರಳಿದ ಮುಜೀದ್ ಅವರು, ಕೊನೆಗೂ ಯಶಸ್ವಿಯಾಗಿದ್ದಾರೆ. ನಾಯಿಯನ್ನು ಕೂರಿಸಿಕೊಂಡು ಅದನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Watch Video

video
error: Content is protected !!