fbpx

Please assign a menu to the primary menu location under menu

ಆಮೆಯನ್ನು ಜೀವಂತ ನುಂಗಲು ಹೋದ ಮೊಸಳೆ, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ಮೊಸಳೆಗಳು ತಮಗಿಂತ ಬಲಿಷ್ಟ ಪ್ರಾಣಿಗಳನ್ನೂ ಬೇಟೆಯಾಡಿ ತಿನ್ನಬಲ್ಲ ತಾಕತ್ತು ಹೊಂದಿದೆ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಮೊಸಳೆಯೊಂದು ಆಮೆಯನ್ನು ಬೇಟೆಯಾಡಲು ಹೋಗಿ ವಿಫಲವಾಗಿದೆ.

ಆಹಾ! ಇವತ್ತಿಗೆ ಒಳ್ಳೆಯ ಆಹಾರ ಸಿಕ್ತು ಎಂದು ಖುಷಿಯಿಂದಲೇ ಆಮೆಯನ್ನು ತಿನ್ನಲು ಹೋದ ಮೊಸಳೆ ಹೇಗೆ ಪೆಚ್ಚುಮೋರೆ ಹಾಕಿಕೊಂಡು ಸುಮ್ಮನಾಗುತ್ತೆ ನೋಡಿ. ತನ್ನ ಬಾಯೊಳಗೆ ಆಮೆ ಇದ್ದರೂ ಅದನ್ನು ತಿನ್ನೋಕೆ ಮೊಸಳೆಗೆ ಆಗಲಿಲ್ಲ

ಯಾಕಂದ್ರೆ ಆಮೆಯ ದೇಹ ದಪ್ಪ ಗಾತ್ರದ ಚಿಪ್ಪು(ಡೊಪ್ಪಿ)ನಿಂದ ರಕ್ಷಣೆಯಾಗಿದೆ. ಇದರಿಂದಾಗಿ ಮೊಸಳೆಗೆ ಆಮೆಯನ್ನು ನುಂಗಲು ಸಾಧ್ಯವಾಗಿಲ್ಲ. ಕೊನೆಗೆ ಆಮೆ ಮೊಸಳೆಯ ಬಾಯಿಯಿಂದ ಹಾರಿ ತಪ್ಪಿಸಿಕೊಂಡಿದೆ.

ಸದ್ಯ ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video
error: Content is protected !!