fbpx

ತಂದೆ-ತಾಯಿಯ ಸೆಲ್ಫೀ ಹುಚ್ಚಿಗೆ ಬಲಿಯಾಗಿದ್ದು ಪುಟ್ಟ ಕಂದಮ್ಮ! ಶಾಕಿಂಗ್ ವಿಡಿಯೋ ನೋಡಿ

ಸೆಲ್ಫೀಗಾಗಿ ಹುಚ್ಚು ಸಾಹಸ ಮಾಡಲು ಹೋಗಿ ಪ್ರತಿವರ್ಷ ಅದೆಷ್ಟೋ ಜನರು ಬಲಿಯಾಗುತ್ತಾರೆ ಇದೀಗ ಇದೇ ಸೆಲ್ಫೀ ಹುಚ್ಚಿಗೆ 10ತಿಂಗಳ ಪುಟ್ಟ ಕಂದಮ್ಮ ಬಲಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಜಸ್ಥಾನದ ಗಂಗನಗರದಲ್ಲಿರುವ ಶಾಪಿಂಗ್ ಮಾಲ್‌ಗೆ ತಮ್ಮ ಪುಟ್ಟ ಮಗುವಿನೊಂದಿಗೆ ಭೇಟಿ ನೀಡಿದ್ದ ದಂಪತಿ ಸ್ವಲ್ಪ ಹೊತ್ತು ಮಾಲ್ ಸುತ್ತಾಡಿದ್ದಾರೆ. ಇದೇ ಸಂದರ್ಭದಲ್ಲಿ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಸೆಲ್ಫಿ ತೆಗೆದುಕೊಂಡಿರೋದು ಮಾಲ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಇನ್ನೇನು ಮಾಲ್‌ಗೆ ಅಳವಡಿಸಿದ್ದ ಎಸ್ಕಲೇಟರ್ ಸವಾರಿ ಮಾಡಲು ಹೋದ ದಂಪತಿ ಅಲ್ಲಿಯೂ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮಗುವನ್ನು ಹಿಡಿದುಕೊಂಡಿದ್ದ ತಾಯಿಯ ಗಮನ ಮೊಬೈಲ್ ಕಡೆ ಹರಿಯುತ್ತಿದ್ದಂತೆ ಮಗು ಕೈಯಿಂದ ಜಾರಿ ಕೆಳಕ್ಕೆ ಬಿದ್ದಿದೆ.

ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಮಗು ಮೂರು ಮಹಡಿಗಳ ಮೇಲಿಂದ ಬಿದ್ದಾಗಿತ್ತು. ಇದನ್ನು ನೋಡಿದ ಸುತ್ತಮುತ್ತಲಿನ ಅಂಗಡಿ ವ್ಯಾಪಾರಿಗಳು ಭಯಭೀತರಾಗಿ ಹೊರಕ್ಕೆ ಓಡಿಬಂದು ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.

ಆದರೆ ಮೂರನೇ ಮಹಡಿಯಿಂದ ಬಿದ್ದ ಕಾರಣ ಶಿಶು ನೆಲಕ್ಕೆ ಅಪ್ಪಳಿಸಿದ ಸ್ಥಳದಲ್ಲಿಯೇ ಸಾವನ್ನಪ್ಪಿತು. ಆದರೂ ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಗು ಆಗಲೇ ಕೊನೆಯುಸಿರೆಳೆದಿದೆ ಎಂದು ಅಲ್ಲಿನ ವೈದ್ಯರು ಘೋಷಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿಯೂ ಎರಡು ವರ್ಷದ ಮಗು ಇದೇ ರೀತಿ ತಾಯಿಯ ಸೆಲ್ಫೀ ಹುಚ್ಚಿಗೆ ಸಮುದ್ರ ಪಾಲಾಗಿ ಮೃತಪಟ್ಟ ಘಟನೆ ನಡೆದಿದೆ.

Watch Video

video

error: Content is protected !!